ಕಾಸರಗೋಡು. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ದ ಸಾಂಸ್ಕೃತಿಕ ಭವನಕ್ಕೆಇತ್ತೀಚೆಗೆ ಭೇಟಿಯಿತ್ತ ಕೊಂಡೆವೂರು ಶ್ರೀಗಳು ಹರಸಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಕೊಡುಗೈದಾನಿ ಸದಾಶಿವ ಶಟ್ಟಿ ಮುಂಬೈ ಇವರು ಮಾತನಾಡಿ ಅಲ್ಪ ಆದಾಯ ಇರುವ ಕಲಾವಿದರು ಕಲೆಯ ಮೇಲಿನ ಪ್ರೀತಿಯಿಂದ ಇಂತಹ ಸಾಧನೆಗೆ ಮುಂದಾದುದು ಅಪೂರ್ವ ಎಂದು ಸಂತೋಷ ವ್ಯಕ್ತಪಡಿಸಿದರು.
ಯಕ್ಷಗಾನ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಾಣ ಕಾರ್ಯವನ್ನು ವೀಕ್ಷಸಿ ಶ್ಲಾಘಿಸಿದರು. ಈ ಕಾರ್ಯಕ್ರಮಕ್ಕೆ ರಾಜಾರಾಮರಾವ್ ಮೀಯಪದವು ಸ್ವಾಗತಿಸಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಗೌರವಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಯ ಕೋಶಾಧಿಕಾರಿ ಶ್ರೀ ಲಕ್ಮೀನಾರಯಣ ಪಟ್ಟೇರಿ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಜಗದೀಶ್ ಕೂಡ್ಲು, ಶ್ರೀಮತಿ ಸುಮಿತ್ರಾ ಆರ್ ಮಯ್ಯ, ಶ್ರೀಮತಿ ಅಮಿತಾ ಶೆಟ್ಟಿ, ಜಯರಾಮ ರೈ, ರವೀಂದ್ರ ರೈ, ಶೀನ ಶೆಟ್ಟಿ ಕಜೆ, ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ, ವಿಷ್ಣು ಶ್ಯಾನುಭೋಗ್, ಮುಂತಾದವರು, ಊರಿನ ಗಣ್ಯರು, ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ