ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಮ್.ಪ್ರಭಾಕರ ಜೋಶಿಯವರ ಮನೆಗೆ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆಯವರು ಭೇಟಿ ನೀಡಿ
ಡಾ. ಎಮ್.ಪ್ರಭಾಕರ ಜೋಶಿ ಮತ್ತು ಶ್ರೀಮತಿ ಸುಚೇತಾ ಜೋಶಿಯವರನ್ನು ಅಭಿನಂದಿಸಿ, ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗಿದ್ದು ಎರಡು ದಿನದ ಸಮ್ಮೇಳನದ ರೂಪುರೇಷೆ ಮತ್ತು ಈವರೆಗೆ ಆದ ಬೆಳವಣಿಗೆಯನ್ನು ತಿಳಿಸಿ, ಸುದೀರ್ಘ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಮುರಲಿ ಕಡೆಕಾರ್, ನವನೀತ್ ಶೆಟ್ಟಿ ಕದ್ರಿ ಮತ್ತು ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್ ಅವರು ದೂರವಾಣಿಯ ಮೂಲಕ ಡಾ.ಜೋಶಿಯವರನ್ನು ಆಹ್ವಾನಿಸಿ ಅಭಿನಂದಿಸಿದರು.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ