Sunday, September 29, 2024
Homeಸುದ್ದಿ13 ವರ್ಷದ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ  47 ವರ್ಷದ ಶಿಕ್ಷಕ -  ‘ನಿನ್ನನ್ನು...

13 ವರ್ಷದ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ  47 ವರ್ಷದ ಶಿಕ್ಷಕ –  ‘ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ರಜೆಯ ಮೊದಲು ನಿನ್ನನ್ನು ಭೇಟಿಯಾಗಲು ಬಯಸುತ್ತೇನೆ’

ಲಖನೌ: ಉತ್ತರ ಪ್ರದೇಶದ ಕನ್ನೌಜ್‌ನ ಸರ್ಕಾರಿ ಶಾಲೆಯೊಂದರ 47 ವರ್ಷದ ಶಿಕ್ಷಕರಿಂದ 13 ವರ್ಷದ 8 ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬಂದಿದೆ. 8 ನೇ ತರಗತಿಯ ವಿದ್ಯಾರ್ಥಿನಿಗೆ ‘ಪ್ರೇಮ ಪತ್ರ’ ಬರೆದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ತಿಳಿದುಬಂದಿದೆ.

ಶಿಕ್ಷಕನನ್ನು ಹರಿಓಂ ಸಿಂಗ್ ಎಂದು ಗುರುತಿಸಲಾಗಿದ್ದು, ಒಂದು ಪುಟದ ಪ್ರೇಮ ಪತ್ರದಲ್ಲಿ ವಿದ್ಯಾರ್ಥಿನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಡಿಸೆಂಬರ್ 30ರಂದು ನೀಡಿದ್ದ ಹೊಸ ವರ್ಷದ ಗ್ರೀಟಿಂಗ್ ಕಾರ್ಡ್ ನ ನಡುವಿನಲ್ಲಿ ಪ್ರೇಮ ಪತ್ರವನ್ನು ಇರಿಸಿ ಬಾಲಕಿಗೆ ಶಿಕ್ಷಕ ನೀಡಿದ್ದ ಎಂದು ಹೇಳಲಾಗುತ್ತಿದೆ.

ಶಿಕ್ಷಕನು ವಿದ್ಯಾರ್ಥಿನಿಯ ಹೆಸರಿನೊಂದಿಗೆ ಪತ್ರವನ್ನು ಪ್ರಾರಂಭಿಸಿದನು, ಅವನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದ. ಶಾಲಾ ರಜೆಯಲ್ಲಿ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದೂ ಪ್ರೇಮ ಪತ್ರದಲ್ಲಿ ಬರೆದಿದ್ದ. ಆಕೆಗೆ ಅವಕಾಶ ಸಿಕ್ಕರೆ, ಅವಳು ತನಗೆ ಫೋನ್ ಮಾಡಬೇಕು ಮತ್ತು ರಜೆಯ ಮೊದಲು ಬಂದು ನನ್ನನ್ನು ಭೇಟಿಯಾಗು ಎಂದು ಅವರು ಬರೆದಿದ್ದಾರೆ.

ಶಿಕ್ಷಕನು ತಾನು ಅವಳನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದನು ಮತ್ತು ಪತ್ರವನ್ನು ಬೇರೆಯವರಿಗೆ ತೋರಿಸಬೇಡ ಮತ್ತು ಅದನ್ನು ಓದಿದ ನಂತರ ಅದನ್ನು ಹರಿದು ಹಾಕಲು ಹೇಳಿದನು. ಆದರೆ ಬಾಲಕಿ ತನ್ನ ಪೋಷಕರಿಗೆ ಪತ್ರದ ಬಗ್ಗೆ ತಿಳಿಸಿದ್ದಾಳೆ ಮತ್ತು ನಂತರ ಪೋಷಕರು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿಚಾರಿಸಿ, ಕ್ಷಮೆಯಾಚಿಸುವಂತೆ ಶಿಕ್ಷಕರನ್ನು ಕೇಳಿದಾಗ ಅವರು ಕಿವಿಗೊಡಲಿಲ್ಲ, ಬದಲಾಗಿ ಗಂಭೀರ ಪರಿಣಾಮ ಬೀರುವುದಾಗಿ ಬೆದರಿಕೆ ಹಾಕಿದರು ಎಂದು ಪೋಷಕರು ಹೇಳುತ್ತಾರೆ. ಬಾಲಕಿಯನ್ನು ಅಪಹರಿಸುವುದಾಗಿ ಶಿಕ್ಷಕನು ಹೇಳಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ವಿಷಯ ಬೆಳಕಿಗೆ ಬಂದ ನಂತರ, ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಕೌಸ್ತುಭ್ ಸಿಂಗ್ ಹರಿಯೋಮ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿ ವಿಪಿನ್ ಕುಮಾರ್ ಅವರಿಗೆ ವಿಷಯದ ತನಿಖೆಯನ್ನು ವಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರ ಸಂಘವೂ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments