![](https://yakshadeepa.com/wp-content/uploads/2022/10/IMG-20221018-WA0044-1024x306.jpg)
![](https://yakshadeepa.com/wp-content/uploads/2022/10/IMG-20221018-WA0053.jpg)
ಉಡುಪಿ : ಕಟೀಲು ಮೇಳದ ಕಲಾವಿದ ಕೀರ್ತನ್‌ಆರ್. ಶೆಟ್ಟಿ (39) ಮತ್ತು ಮಂದಾರ್ತಿ ಮೇಳದ ಕಲಾವಿದನಾಗಿದ್ದ ಚಂದ್ರ ನಾಯ್ಕ ನಂಚಾರು (29) ಇಬ್ಬರು ಯುವ ಕಲಾವಿದರು ಅಕಾಲಿಕವಾಗಿ ಈ ಲೋಕಯಾತ್ರೆ ಮುಗಿಸಿದ್ದು, ಯಕ್ಷಗಾನಕ್ಕೆ ಮತ್ತು ಆಯಾ ಕುಟುಂಬಕ್ಕೆ ಸಹಿಸಲಾಗದ ಆಘಾತಕರ ವಾರ್ತೆಯಾಗಿದೆ.
ಕೀರ್ತನ್ ಆರ್. ಶೆಟ್ಟಿ ಅವರು ಕಟೀಲು ಮೇಳವೂ ಸೇರಿ ವಿವಿಧ ಮೇಳಗಳಲ್ಲಿ ಸುಮಾರು 20 ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದು ದಿನಾಂಕ 18-11-2022ರಂದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಚಂದ್ರ ನಾಯ್ಕ ಐದಾರು ವರ್ಷ ಮಂದಾರ್ತಿ ಮೇಳದಲ್ಲಿದ್ದು ಕಳೆದ ಎರಡು ವರ್ಷದಿಂದ ಮೇಳಕ್ಕೆ ಹೋಗುತ್ತಿರಲಿಲ್ಲ.
ಮೇಳದಲ್ಲಿ ಸ್ತ್ರೀವೇಷ ಮಾಡುತ್ತಿದ್ದ ಅವರು 24-11-2022ರಂದು ಗರ್ಭಿಣಿ ಹೆಂಡತಿ ಮತ್ತು ಎರಡು ವರ್ಷದ ಹೆಣ್ಣು ಮಗುವನ್ನುಅಗಲಿದ್ದಾರೆ.
ಇವರ ನಿಧನಕ್ಕೆಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.