ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವವು ಇದೇ ಬರುವ ನವಂಬರ್ 29 ಮತ್ತು 30 ಮಂಗಳವಾರ ಮತ್ತು ಬುಧವಾರಗಳಂದು ( ವೃಶ್ಚಿಕ ಮಾಸ 13 ಮತ್ತು 14 ) ಕ್ಷೇತ್ರ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.

ಆ ಪ್ರಯುಕ್ತ ಭಕ್ತಾಭಿಮಾನಿಗಳು ಆ ದಿನಗಳಲ್ಲಿ ಕ್ಷೇತ್ರ ಸಂದರ್ಶಿಸಿ ಶ್ರೀ ದೇವರ ಶ್ರೀ ಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮ ವಿವರ
——————–
28.11.2022 – ಸಂಜೆ 7 ರಿಂದ
ವಾಸ್ತು ಬಲಿ, ರಕ್ಷೋಘ್ನ, ಅತ್ತಾಳ ಪೂಜೆ
29.11.2022 – ಬೆಳಗ್ಗೆ 6 ರಿಂದ
ಅಭಿಷೇಕ ಪೂಜೆ, ಉಷಪೂಜೆ, ಗಣಹೋಮ, ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ.
29.11.2022 – ಸಂಜೆ 06.45 – ಮೂಡುಮನೆ ಬಳ್ಳುಳ್ಳಾಯ ತರವಾಡು ಮನೆಯಿಂದ ಭಂಡಾರ ಆಗಮನ.
ಸಂಜೆ 06.30 ದೀಪಾರಾಧನೆ.
ರಾತ್ರೆ 07.00 ತೊಡಂಗಲ್
ರಾತ್ರೆ 07.30 ರಾತ್ರೆ ಪೂಜೆ
ರಾತ್ರೆ 07.45 – ದೇವರ ಬಲಿ ಹೊರಡುವುದು, ಶ್ರೀ ಭೂತಬಲಿ.
ರಾತ್ರೆ 08.45 – ಕೋಟೂರು ಕಟ್ಟೆ ಸವಾರಿ.
ರಾತ್ರೆ 08.50 ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಲ್ಲ, ಮುಳಿಯಾರು – ಇವರಿಂದ ಯಕ್ಷಗಾನ ಬಯಲಾಟ.
ರಾತ್ರೆ 10.30 ಕ್ಕೆ – ಶ್ರೀ ದೇವರ ಕೋಟೂರು ಕಟ್ಟೆ ಸವಾರಿ ಹಿಂತಿರುಗುವುದು.
ಕಟ್ಟೆ ಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ,
30.11.2022 ಬುಧವಾರ – ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ,
ಬೆಳಗ್ಗೆ 10.00 ಕ್ಕೆ – ಶಿವೇಲಿ, ರಾಜಾಂಗಣದಲ್ಲಿ ದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪೂಜೆ, ಮಂತ್ರಾಕ್ಷತೆ,
ಮಧ್ಯಾಹ್ನ 01.00 ರಿಂದ – ಶ್ರೀ ವಿಷ್ಣುಮುರ್ತಿ ದೈವದ ಕೋಲ
ಸಂಜೆ – 06.30 – ದೀಪಾರಾಧನೆ.
ರಾತ್ರೆ – 07.30 – ಶ್ರೀರಂಗಪೂಜೆ

- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

