ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ನಡುವಿನ ಸಂಭಾಷಣೆಯ ವಿವರಗಳನ್ನು ಸೋರಿಕೆ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ಮಾತಿನ ಚಕಮಕಿ ನಡೆಸಿದರು.
ಉಭಯ ನಾಯಕರ ನಡುವಿನ ಸಂಭಾಷಣೆಯ ವಿವರಗಳು “ಪತ್ರಿಕೆಗಳಿಗೆ ಸೋರಿಕೆಯಾಗುತ್ತಿವೆ” ಎಂದು ಕ್ಸಿ ಜಿನ್‌ಪಿಂಗ್ ಜಸ್ಟಿನ್ ಟ್ರುಡೊ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಘಟನೆಯ ವೀಡಿಯೊದಲ್ಲಿ ಕ್ಸಿ ಜಿನ್‌ಪಿಂಗ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ,
ಇಬ್ಬರ ನಡುವೆ ಚರ್ಚಿಸಲಾದ ಎಲ್ಲವೂ “ಪತ್ರಿಕೆ(ಗಳಿಗೆ) ಸೋರಿಕೆಯಾಗಿದೆ. “ಅದು ಸೂಕ್ತವಲ್ಲ ಮತ್ತು ಸಂಭಾಷಣೆಯನ್ನು ನಡೆಸುವ ಸರಿಯಾದ ರೀತಿ ಅಲ್ಲ” ಎಂದು ಕ್ಸಿ ಜಿನ್‌ಪಿಂಗ್ ಹೇಳುವುದನ್ನು ಕೇಳಬಹುದು.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿನ್ ಟ್ರುಡೊ, “ಕೆನಡಾದಲ್ಲಿ ನಾವು ಮುಕ್ತ ಮತ್ತು ಸ್ಪಷ್ಟವಾದ ಸಂಭಾಷಣೆಯನ್ನು ನಂಬುತ್ತೇವೆ ಮತ್ತು ಅದನ್ನೇ ನಾವು ಮುಂದುವರಿಸುತ್ತೇವೆ. ನಾವು ಒಟ್ಟಿಗೆ ರಚನಾತ್ಮಕವಾಗಿ ಕೆಲಸ ಮಾಡಲು ನೋಡುವುದನ್ನು ಮುಂದುವರಿಸುತ್ತೇವೆ, ಆದರೆ ನಾವು ಒಪ್ಪದ ವಿಷಯಗಳಿವೆ. ಎಂದು ಹೇಳಿದರು.
ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೂರು ವರ್ಷಗಳ ನಂತರ ತಮ್ಮ ಮೊದಲ ಮಾತುಕತೆ ನಡೆಸಿದರು. ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಜಿ 20 ಸಭೆಯ ಹಿನ್ನೆಲೆಯಲ್ಲಿ ಉಭಯ ವಿಶ್ವ ನಾಯಕರ ನಡುವೆ ಚರ್ಚೆ ನಡೆಯಿತು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ