ಬದಿಯಡ್ಕದ ಡೆಂಟಲ್ ಕ್ಲಿನಿಕ್ ನ ಡಾ. ಕೃಷ್ಣಮೂರ್ತಿ ಅವರದ್ದು ಆತ್ಮಹತ್ಯೆ ಅಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಮಾತುಗಳು ಕೇಳಿಬರುವ ಹಿನ್ನೆಲೆಯಲ್ಲಿ ಪೋಲೀಸರು ಆ ನಿಟ್ಟಿನಲ್ಲಿ ತನಿಖೆಯನ್ನು ಕೇಂದ್ರೀಕರಿಸುವ ಅಗತ್ಯವಿದೆ. ನಾಪತ್ತೆ ಪ್ರಕರಣವನ್ನೇ ದಾಖಲಿಸಲು ಮೀನಮೇಷ ಎಣಿಸಿದ್ದ ಪೊಲೀಸರು ಈಗ ಮೈ ಕೊಡವಿ ಕಾರ್ಯತತ್ಪರರಾಗಬೇಕಾಗಿದೆ.
ಘಟನೆಯ ಸೂಕ್ಷ್ಮ ವಿವರ:
ನವಂಬರ್ ಎಂಟು ಡಾಕ್ಟರ್ ಪಾಲಿಗೆ ಕರಾಳದಿನವಾಗಿತ್ತು. ಆ ದಿನ ಮುಸ್ಲಿಂ ಮಹಿಳೆ ಹಲ್ಲು ಕೀಳಲು ಬಂದಾಗ ಡಾಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಸ್ಲಿಮ್ ಕುಟುಂಬದ ಆರೋಪ. ಮರುದಿನ ಗೂಂಡಾಗಳ ಗುಂಪು ಕಟ್ಟಿ ಕೊಂಡು ಬಂದ ಅವರು ಡಾಕ್ಟರರ ಬಳಿ 10 ಲಕ್ಷದ ಹಣದ ಬೇಡಿಕೆಯನ್ನು ಇರಿಸಿತು ಎಂದು ಹೇಳಲಾಗುತ್ತಿದೆ.
ಅದಕ್ಕೆ ಡಾಕ್ಟರ್ ಸಮ್ಮತಿಯನ್ನು ನೀಡಲಿಲ್ಲ. ಆಗ ಆ ಗುಂಪು ಪೋಲಿಸ್ ದೂರು ನೀಡುವ ಬೆದರಿಕೆ ಹಾಕಿತು. ಮತ್ತು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಸ್ಥಳೀಯರು ತಡೆದರು ಎಂದು ವರದಿಗಳು ಹೇಳುತ್ತವೆ.
ಈ ಘಟನೆಗಳಿಂದ ತೀವ್ರ ಮನನೊಂದ ದಂತವೈದ್ಯರು ತನ್ನ ಬೈಕನ್ನೇರಿ ಹೊರಟಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿ ತಿಳಿದುಕೊಂಡಂತೆ ಅವರು ಮನೆಗೆ ಹೋಗಿರಲಿಲ್ಲ. ಆಮೇಲೆ ಡಾಕ್ಟರ್ ಮೃತದೇಹ ಕುಂದಾಪುರ ಸಮೀಪದ ಹಟ್ಟಿಯಂಗಡಿ ತಲ್ಲೂರು ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೆ ಹಳಿಗಳಲ್ಲಿ ಛಿದ್ರಛಿದ್ರವಾದ ಸ್ಥಿತಿಯಲ್ಲಿ ದೊರಕಿತು.
ಒಂದು ವರದಿಯ ಪ್ರಕಾರ ಡಾಕ್ಟರ್ ಕೃಷ್ಣಮೂರ್ತಿ ಅವರು ಬೈಕ್ ಹತ್ತಿ ಹೋದ ದಿನವೇ ಅಂದರೆ ನವೆಂಬರ್ 8ರಂದು ಅವರ ಪತ್ನಿ ದೂರು ನೀಡಲು ಬದಿಯಡ್ಕ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಆಗ ಪೋಲಿಸರು ದೂರು ಸ್ವೀಕರಿಸಿರಲಿಲ್ಲ. ಪೋಲೀಸರಿಗೆ ಅದಕ್ಕೆ ಕಾರಣಗಳಿರಬಹುದು.
ಆ ದಿನವೇ ದೂರು ಸ್ವೀಕರಿಸಿ ಹುಡುಕಿದ್ದರೆ ಡಾಕ್ಟರ್ ಜೀವಂತವಾಗಿರುವ ಸಾಧ್ಯತೆಗಳು ಇದ್ದುವು.
ಮುಸ್ಲಿಂ ಗೂಂಡಾಗಳು ಡಾಕ್ಟರ್ ಕ್ಲಿನಿಕ್ ಒಳಗೆ ನುಗ್ಗಿ ಅವರ ಮೈಮೇಲೆ ಕೈಹಾಕಿದ್ದು ಪೋಲೀಸರಿಗೆ ಆದಿನ ಗೊತ್ತೇ ಇರಲಿಲ್ಲ ಎಂಬುದು ಸತ್ಯವಲ್ಲ. ನೂರಿನ್ನೂರು ಮೀಟರ್ ಗಳ ಪಕ್ಕವೇ ಪೊಲೀಸ್ ಠಾಣೆ ಇರುವಾಗ ಇದು ಖಂಡಿತಾ ಅವರ ಗಮನಕ್ಕೆ ಬಂದಿರುತ್ತದೆ.
ಆದರೆ ಅವರು ಯಾರಾದರೂ ದೂರು ಕೊಡುವ ವರೆಗೆ ಕಾಯುವ ಬದಲು ಸ್ಥಳಕ್ಕೆ ತಾವೇ ಆಗಮಿಸಿ ತನಿಖೆ ಮಾಡಬೇಕಾಗಿತ್ತು. ಸ್ವಯಂಪ್ರೇರಿತ ಕೇಸು ದಾಖಲಿಸಿ ಡಾಕ್ಟರ್ ಹೆಚ್ಚು ದೂರ ಹೋಗುವ ಮೊದಲೇ ಅವರನ್ನು ಕರೆತರುವ ಸಾಧ್ಯತೆ ಇತ್ತು. ಹೋಗಲಿ, ಅದೇ ದಿನ ಕಾಣೆಯಾದ ಬಗ್ಗೆ ಕೊಟ್ಟ ದೂರನ್ನಾದರೂ ಸ್ವೀಕರಿಸಬಹುದಿತ್ತು.
ಮುಸ್ಲಿಂ ಗೂಂಡಾಗಳು ಮೈಮೇಲೆ ಕೈಮಾಡಿದ ಮೇಲೆ ಡಾಕ್ಟರ್ ಮಾನಸಿಕವಾಗಿ ಕುಗ್ಗಿದ್ದರು. ಇದರಿಂದಾಗಿ ಅವರು ಸ್ಥಳ ಬಿಟ್ಟು ತೆರಳಿದ್ದರು.
ಇನ್ನು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಇರುವ ಕಾರಣಗಳು:
ಹಿಂದೂ ಸಂಘಟನೆಗಳು ಇದೊಂದು ವ್ಯವಸ್ಥಿತ ಲ್ಯಾಂಡ್ ಜಿಹಾದ್ ಮಾಫಿಯಾ ಎಂದು ಆರೋಪಿಸಿವೆ. ಡಾಕ್ಟರ್ ನ್ಮು ಸಮಸ್ಯೆಯಲ್ಲಿ ಸಿಲುಕಿಸಲೆಂದೇ ಮುಸ್ಲಿಂ ಮಹಿಳೆಯನ್ನು ಕಳುಹಿಸಿ ದೂರು ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಇನ್ನೂ ಕೆಲವು ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತವೆ.
1. ಹಣ ದೋಚುವ ಯತ್ನ – ಡಾಕ್ಟರ್ ಬಳಿ ಹಣ ಇರಬಹುದು ಎಂಬ ಭಾವನೆಯಿಂದ ಜಿಹಾದಿಗಳು ಹಣ ದೋಚಲು ಈ ಉಪಾಯವನ್ಮು ಅನುಸರಿಸಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
2. ಲ್ಯಾಂಡ್ ಜಿಹಾದ್ – ಮೊದಲೇ ಹೇಳಿದಂತೆ ಡಾಕ್ಟರರ ಜಾಗದ ಅಂದರೆ ಅವರ ಕ್ಲಿನಿಕ್ ಇರುವ ಜಾಗ ಮತ್ತು ಮನೆ ಇರುವ ಜಾಗದ ಮೇಲೆ ಕಾಸರಗೋಡು ಪರಿಸರದ ಭಾರೀ ಕುಳಗಳಿಗೆ ಕಣ್ಣಿತ್ತು. ಇದೇ ಹೌದೆಂದಾದರೆ ಈ ಪ್ರಕರಣಕ್ಕೆ ಭೂಗತ ಜಗತ್ತಿನ ನಂಟಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.
3. ಹನಿಟ್ರ್ಯಾಪ್ – ಆರೋಪಿಗಳಿಗೆ ಈ ಉದ್ದೇಶ ಇದ್ದಿರುವ ಸಾಧ್ಯತೆಯೂ ಅಲ್ಲಗಳೆಯಲಾಗುವುದಿಲ್ಲ. ಡಾಕ್ಟರ್ ಇದಕ್ಕೆ ಅವಕಾಶ ಕೊಡದೆ ಇದ್ದುದರಿಂದ ಅವರಿಗೆ ಬೆದರಿಕೆ ಹಾಕಿರಬಹುದು ಎಂದು ಹೇಳಲಾಗುತ್ತಿದೆ.
4. ಏಳಿಗಯನ್ನು ಸಹಿಸದ ಕೆಲವು ವ್ಯಕ್ತಿಗಳು – ದಂತವೈದ್ಯರಾಗಿ ಕೃಷ್ಣಮೂರ್ತಿ ಯವರ ಏಳಿಗೆ, ಪ್ರಸಿದ್ಧಿಯನ್ನು ಸಹಿಸದೆ ಅವರನ್ಮು ಹಾಗೂ ಅವರ ಹಲ್ಲಿನ ಆಸ್ಪತ್ರೆಯನ್ನು ಹೇಗಾದರೂ ಮಾಡಿ ಬದಿಯಡ್ಕದಿಂದ ಸ್ಥಳಾಂತರಿಸಬೇಕೆಂಬ ಹುನ್ನಾರ ತೆರೆಯ ಮರೆಯಲ್ಲಿ ನಡೆಯುತ್ತಿತ್ತು ಎಂದೂ ಹೇಳಲಾಗುತ್ತಿದೆ. ಅದರಲ್ಲೂ ಅವರ ಡೆಂಟಲ್ ಕ್ಲಿನಿಕ್ ಕೆಲವರಿಗೆ ನುಂಗಲಾರದ ತುತ್ತಾಗಿತ್ತೇ ಎಂಬ ಸಂಶಯ ವ್ಯಕ್ತಪಡಿಸಲಾಗುತ್ತಿದೆ.
ಹೀಗೆ ಹಲವಾರು ಕೋನಗಳಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ.
ಮುಂದಿನ ದಿನಗಳಲ್ಲಿ ತನಿಖೆ ಯಾವ ರೀತಿಯಲ್ಲಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು