ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅವರ ಶವ ನೀರೊಳಗಿದ್ದ ಕಾರಿನಲ್ಲಿ ಪತ್ತೆ,ಯಾಗಿದೆ.

ಐದು ದಿನಗಳ ಬಳಿಕ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಮುಳುಗಿದ್ದ ಕಾರು ಪತ್ತೆಯಾಗಿದೆ. ನೀರೊಳಗಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ.
ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಸಿಕ್ಕಿದೆ. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ.

ಅಣ್ಣನ ಮಗ ಚಂದ್ರಶೇಖರ್ ನ ಶವ ಕಂಡು ಶಾಸಕ ರೇಣುಕಾಚಾರ್ಯ ಅವರು ತೀವ್ರವಾಗಿ ಗೋಳಾಡಿದ್ದಾರೆ. ಕುಟುಂಬಸ್ಥರ ಆಕ್ರಂದನವನ್ನು ನೋಡಿ ಅಲ್ಲಿದ್ದವರಿಗೆಲ್ಲಾ ಕಣ್ಣು ತುಂಬಾ ನೀರು ತುಂಬಿತ್ತು.
ಶವ ಕಂಡು ಸಾವಿಗೆ ನಾನೇ ಕಾರಣ ಎಂದು ಗೋಳಾಡಿದ ಶಾಸಕರನ್ನು ಸಮಾಧಾನಪಡಿಸುವುದೇ ಅಲ್ಲಿದ್ದವರಿಗೆ ಒಂದು ಸವಾಲಾಗಿತ್ತು. “ಶವ ಎಂದು ಹೇಳಬೇಡಿ, ಚಂದ್ರು ಎಂದು ಕರೆಯಿರಿ” ಎಂದು ರೇಣುಕಾಚಾರ್ಯ ದುಃಖಿಸಿದ್ದಾರೆ.
ಈ ಮಧ್ಯೆ “ಕಾರಿನಲ್ಲಿ ಶವ ಸಿಕ್ಕಿದೆ, ಉಳಿದದ್ದು ತನಿಖೆಯಿಂದ ಹೊರಬರಬೇಕಿದೆ. ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

