ಹನ್ನೊಂದನೆಯ ವರ್ಷದ ಸರ್ಪಂಗಳ ಯಕ್ಷೋತ್ಸವ ಮತ್ತು ಸರ್ಪಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಇಂದು, ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ.
ಸಂಜೆ 6.00 ರಿಂದ 11.00ರವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.
2022ನೆಯ ಸಾಲಿನ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ.ಟಿ. ಜಯರಾಮ ಭಟ್ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು.
ಈ ವರ್ಷದ ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ.
ಇಂದು ಒಂದು ಅತ್ಯುತ್ತಮ ಯಕ್ಷಗಾನದ ನಿರೀಕ್ಷೆಯಲ್ಲಿ ಯಕ್ಷಗಾನದ ಅಭಿಮಾನಿಗಳಿದ್ದಾರೆ. ಒಂದನೇ ಹಾಗೂ ಎರಡನೇ ಪ್ರಸಂಗದಲ್ಲಿ ನುರಿತ, ಸುಪ್ರಸಿದ್ಧ ಕಲಾವಿದರೇ ಇದ್ದಾರೆ. ಎರಡನೇ ಪ್ರಸಂಗ ‘ಮಾರಣಾಧ್ವರ’ ಉತ್ತಮ ಪ್ರದರ್ಶನ ಕಾಣಲಿದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದರಲ್ಲೂ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಅತ್ಯುತ್ತಮ ನಿರ್ವಹಣೆಯನ್ನು ಕಾಣುವುದಂತೂ ಖಂಡಿತ.
ಇನ್ನೂ ಒಂದು ಕುತೂಹಲದ ಅಂಶವೆಂದರೆ ಗುಂಡಿಮಜಲು ಗೋಪಾಲ ಭಟ್ಟರ ಲಕ್ಷ್ಮಣ. ಕಲಾರಸಿಕರು ಪ್ರದರ್ಶನದ ಸಮಯದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ವಿವರಗಳಿಗೆ ಚಿತ್ರ ನೋಡಿ
- ಮತ್ತೆ ಮಾರ್ದನಿಸಲಿದೆ ಕಟೀಲು ಮೇಳದ ಕಲಾವಿದರ ಗೆಜ್ಜೆಯ ಸದ್ದು! – ಕಟೀಲಿನ ಆರು ಮೇಳಗಳ ತಿರುಗಾಟ ಇಂದಿನಿಂದ (25-11-2024) ಆರಂಭ
- ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿದ ವಿವಾಹಿತ ವ್ಯಕ್ತಿ
- ಮೊಘಲರು ಹರಿಹರ್ ಮಂದಿರವನ್ನು ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದರೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು: ಸಮೀಕ್ಷೆಗೆ ಬಂದ ಅಧಿಕಾರಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ – ಪೊಲೀಸರ ಅಶ್ರುವಾಯು ದಾಳಿಯಲ್ಲಿ ಮೂವರ ಸಾವು
- ಮಲಯಾಳಂ ಸಿನಿಮಾ ಸೆಟ್ಗಳು ಸೇಫ್ ಅಲ್ಲ ಎಂದು ಹೇಳಿದ ನಟಿ ಸುಹಾಸಿನಿ ಮಣಿರತ್ನಂ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ