Saturday, November 23, 2024
Homeಸುದ್ದಿಪುತ್ತೂರು ತುಳುಕೂಟಕ್ಕೆ ತುಳು ಅಕಾಡೆಮಿ‘ಸಿರಿ ಚಾವಡಿ ಸಂಘಟನಾ ಪುರಸ್ಕಾರ’

ಪುತ್ತೂರು ತುಳುಕೂಟಕ್ಕೆ ತುಳು ಅಕಾಡೆಮಿ
‘ಸಿರಿ ಚಾವಡಿ ಸಂಘಟನಾ ಪುರಸ್ಕಾರ’

ಪುತ್ತೂರು : ತುಳುನಾಡಿನ ಇತಿಹಾಸದಲ್ಲಿ ಪುತ್ತೂರು ತಾಲೂಕಿನಲ್ಲಿ ತುಳು ಸಂಘಟನಾ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ಪ್ರಸಿದ್ಧಿಗಳಿಸಿದ್ದ, 50ನೇ ವರ್ಷದ ಸುವರ್ಣ ಸಂಭ್ರಮದಲ್ಲಿರುವ ಪ್ರತಿಷ್ಠಿತ ‘ಪುತ್ತೂರು ತುಳು ಕೂಟ’ವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಸಿರಿ ಚಾವಡಿ ಸಂಘಟನಾ ಪುರಸ್ಕಾರ’ ನೀಡಿ ಗೌರವಿಸಿದೆ.


ಉಪ್ಪಿನಂಗಡಿಯಲ್ಲಿ ಜರಗಿದ ಅಕಾಡೆಮಿಯ ‘ತುಳುವ ಐಸಿರಿ-2022’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೂಟದ ಗೌರವ ಸಲಹೆಗಾರ ಪ್ರೊ.ವಿ.ಬಿ. ಅರ್ತಿಕಜೆ ಅವರು ತುಳುಕೂಟದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪುತ್ತೂರು ತುಳುಕೂಟದ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ನಿಕಟಪೂರ್ವಾಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ ರೈ, ಉಪಾಧ್ಯಕ್ಷ, ನ್ಯಾಯವಾದಿ ಎ. ಮಹಾಬಲ ಗೌಡ, ಸದಸ್ಯ ಕಲಾವಿದ ಕೃಷ್ಣಪ್ಪ ಶಿವನಗರ ಮುಂತಾದವರು ಜೊತೆಯಲ್ಲಿದ್ದರು.


ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದ ಸಮಾರಂಭದ ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ವಹಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರಧಾನ ಮಾಡಿದರು.


ಮುಖ್ಯಅತಿಥಿಗಳಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ.ವಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಪ್ರೊ.ಎ.ವಿ.ನಾವಡ, ಉದ್ಯಮಿಗಳಾದ ಡಿ.ಚಂದಪ್ಪ ಮೂಲ್ಯ, ಪ್ರಕಾಶ್ ಬಿ. ಪಾಲ್ಗೊಂಡಿದ್ದರು.

ಪುತ್ತೂರು ತುಳು ಕೂಟವನ್ನು ಈ ಹಿಂದೆ ಮಹಾರಾಷ್ಟ್ರದ ತುಳುನಾಡ್ ಸಂಘ ಸಾಂಗ್ಲಿ-ಮೀರಜ್ ಪುರಸ್ಕರಿಸಿತ್ತು. ಅಕಾಡೆಮಿ ಸದಸ್ಯ ಸಂಚಾಲಕರು ಕಡಬ ದಿನೇಶ್ ರೈ ಮುಂತಾದವರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments