Friday, November 22, 2024
Homeಸುದ್ದಿದೇವಸ್ಥಾನದಲ್ಲಿ 'ಮುನ್ನಿ ಬದನಾಮ್ ಹುಯಿ' ಐಟಂ ಸಾಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ...

ದೇವಸ್ಥಾನದಲ್ಲಿ ‘ಮುನ್ನಿ ಬದನಾಮ್ ಹುಯಿ’ ಐಟಂ ಸಾಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವತಿ – ಎಫ್ ಐ ಆರ್ ದಾಖಲು – ಆಮೇಲೆ ಕ್ಷಮೆ ಕೇಳಿದ ಯುವತಿ 

ಇತ್ತೀಚಿಗೆ ನಡೆಯುತ್ತಿರುವ ಕೆಲವೊಂದು ಘಟನೆಗಳನ್ನು ನೋಡುವಾಗ ನಮ್ಮ ಸಮಾಜ ಎಲ್ಲಿಗೆ ಹೋಗುತ್ತಿದೆ ಎಂಬ ಖೇದವುಂಟಾಗುತ್ತಿದೆ. ಎಲ್ಲಿಯೂ ಇಲ್ಲದ, ಬೇರೆ ಯಾವುದೇ ಧರ್ಮದಲ್ಲಿ ಇರದಷ್ಟು ಸ್ವಾತಂತ್ರ್ಯವನ್ನು ಸ್ತ್ರೀಯರಿಗೆ ಹಿಂದೂ ಧರ್ಮದಲ್ಲಿ ನೀಡಲಾಗಿದೆ. ಆದರೆ ಅದರ ದುರುಪಯೋಗವೇ ಹೆಚ್ಚಾಗಿ ಆಗುತ್ತಿದೆ. 

ಮಧ್ಯಪ್ರದೇಶದಲ್ಲಿ ಇಂತಹುದೇ ಒಂದು ಘಟನೆ ನಡೆದಿದೆ. ದೇವಸ್ಥಾನದೊಳಗೆ ಮುನ್ನಿ ಬದ್ನಾಂ ಹಾಡಿಗೆ ಮುಖ ಮುರಿದುಕೊಂಡು ವಿಡಿಯೋ ಅಪ್ಲೋಡ್ ಮಾಡಿದ ಯುವತಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಕೆಲವರು ಮನಸ್ಸಿನ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲವರು ಭಕ್ತಿಯ ಮೊರೆಹೋಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರೆ, ಮತ್ತೊಬ್ಬ ಯುವತಿ ದೇವಸ್ಥಾನದಲ್ಲಿ ಐಟಂ ಸಾಂಗ್ ಹಾಡಿ ವೀಡಿಯೊ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ದೇವಸ್ಥಾನದ ಆವರಣದಲ್ಲಿ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡಿದ ಯುವತಿಯ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಹಾಡಿಗೆ ನೇಹಾ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನೃತ್ಯ ಮಾಡಿದರು. ಇದನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಜರಂಗದಳದ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ದೇವಸ್ಥಾನದೊಳಗೆ ಇಂತಹ ರೀಲ್‌ಗಳನ್ನು ತಯಾರಿಸಿ ಧಾರ್ಮಿಕ ಭಾವನೆಗಳಿಗೆ ದ್ರೋಹ ಬಗೆದಿದ್ದಾಳೆ. ಅಲ್ಲದೇ ಯುವತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೂಡಲೇ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಅಷ್ಟೇ ಅಲ್ಲ ಭಕ್ತರ ಭಾವನೆಗೆ ಧಕ್ಕೆ ತಂದಿರುವ ಯುವತಿಯ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

ವಿವಾದ ಹೆಚ್ಚಾಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ. ಆದರೆ ಹಿಂದೂ ಸಂಘಟನೆಗಳು ಯುವತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಆಕ್ರೋಶ ಮತ್ತು ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಮಹಿಳೆ ತನ್ನ ವೀಡಿಯೊವನ್ನು ಅಳಿಸಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದರು.

ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಷಮೆಯಾಚಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಈ ಯುವತಿ ಇನ್ಸ್ಟಾಗ್ರಾಮ್ ನಲ್ಲಿ ಸಂಪೂರ್ಣ ಸಕ್ರಿಯಳಾಗಿದ್ದು, 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments