ನಾಲ್ಕು ಜನರು (ಇಬ್ಬರು ಮಕ್ಕಳು) ಪ್ರಯಾಣಿಸುತ್ತಿದ್ದ ಬೈಕ್ ನ ಚಕ್ರ ಪಂಕ್ಚರ್ ಆಗಿ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಅದರಲ್ಲಿದ್ದ ಇಬ್ಬರು ಹುಡುಗಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರಿಗೆ ಗಂಭೀರ ಗಾಯಗಳಾಗಿದೆ.
ದಸರಾ ಹಬ್ಬದ ಕಾರಣ ರಜೆಯಿದ್ದುದರಿಂದ ಒಂದೇ ಕುಟುಂಬದ ನಾಲ್ವರು ಗ್ರಾಮಕ್ಕೆ ಬರುತ್ತಿದ್ದಾಗ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಚಕ್ರ ಪಂಕ್ಚರ್ ಆಗಿದೆ. ಕೂಡಲೇ ಬೈಕ್ ರಭಸದಿಂದ ನೆಲಕ್ಕೆ ಬಿದ್ದ ಕಾರಣ ಆ ರಭಸಕ್ಕೆ ಓರ್ವ ಮಹಿಳೆ ಮತ್ತು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ನಡೆದದ್ದು ನಿಪ್ಪಾಣಿ ತಾಲೂಕಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುರ್ಲಿ ಗ್ರಾಮದ ಹತ್ತಿರ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬ ದಸರಾ ರಜೆಯಲ್ಲಿ ಊರಿಗೆ ಮರಳುತ್ತಿತ್ತು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಲಕ್ಷ್ಮೀ (25), ಭಾಗ್ಯಶ್ರೀ (13) ಎಂಬವರು ಮೃತಪಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಹಣಮಂತ ಸಕ್ರಿ (23), ಮಾರುತಿ ಚುನಾಮಾದಾರ (6) ಗಾಯಗೊಂಡವರು.
ಗಾಯಾಳುಗಳನ್ನು ನಿಪ್ಪಾಣಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
- ಅಂಬಿಕಾ ವಿದ್ಯಾಲಯದ ನಿಹಾರಿಕಾಗೆ ಬಹುಮಾನ
- ತನ್ನದೇ ನವಜಾತ ಶಿಶುವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನ – ಆಸ್ಪತ್ರೆಯಿಂದಲೇ ಯುವತಿಯ ಬಂಧನ
- ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಯು ತನ್ನ ಪತ್ನಿ, 3 ಮಕ್ಕಳನ್ನು ಕೊಂದ ನಂತರ ತಾನು ಆತ್ಮಹತ್ಯೆ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ
- ಹೊಸ ಆಟೋರಿಕ್ಷಾ ಗೆಲ್ಲುವುದಕ್ಕಾಗಿ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು – ಸ್ಪೋಟಕ ಪೆಟ್ಟಿಗೆಯ ಮೇಲೆ ಕುಳಿತ ಯುವಕ ಪಟಾಕಿ ಸ್ಪೋಟಗೊಂಡು ಸಾವು