Friday, September 20, 2024
Homeಸುದ್ದಿಹತ್ತು ಅಂಗಡಿಗಳ ಮೇಲೆ ಹತ್ತಿದ ಹಾಲಿನ ಲಾರಿ - ಅಂಗಡಿಗಳು ಧ್ವಂಸ, ಮುಂಜಾನೆಯ ಸಮಯವಾದ್ದರಿಂದ ಯಾವುದೇ...

ಹತ್ತು ಅಂಗಡಿಗಳ ಮೇಲೆ ಹತ್ತಿದ ಹಾಲಿನ ಲಾರಿ – ಅಂಗಡಿಗಳು ಧ್ವಂಸ, ಮುಂಜಾನೆಯ ಸಮಯವಾದ್ದರಿಂದ ಯಾವುದೇ ಜೀವಹಾನಿ ಇಲ್ಲ  

ಕೇರಳದ ಕಣ್ಣೂರಿನ ಚಾಲ ದಲ್ಲಿ ಹಾಲಿನ ಗಾಡಿಯಿಂದ 10 ಅಂಗಡಿಗಳು ಧ್ವಂಸವಾಗಿವೆ. ಮುಂಜಾನೆ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಚಾಲ ಮಾರುಕಟ್ಟೆಯಲ್ಲಿ ಹಾಲಿನ ಲಾರಿಯು ಸುಮಾರು 10 ಅಂಗಡಿಗಳನ್ನು ಧ್ವಂಸಗೊಳಿಸಿದೆ. ನಾಲ್ಕು ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ.

ಕಣ್ಣೂರಿನಲ್ಲಿ ಹಾಲಿನ ವ್ಯಾನ್ ಹತ್ತು ಅಂಗಡಿಗಳನ್ನು ಧ್ವಂಸಗೊಳಿಸಿದೆ, ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ.

ಕಣ್ಣೂರಿನ ಕೂತುಪರಂಬು ರಸ್ತೆಯಲ್ಲಿರುವ ಚಾಲಾ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗಿನ ಜಾವ 1 ಗಂಟೆಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಕೂಡಲೇ ಅಕ್ಕಪಕ್ಕದ ಸ್ಥಳೀಯರು ಲೈನ್‌ಮ್ಯಾನ್‌ಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನ ಇನ್ನೂ ಬಾರದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿತು.

ಚಾಲಕ ನಿದ್ರೆಗೆ ಜಾರಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments