Saturday, November 23, 2024
Homeಯಕ್ಷಗಾನ'ರಂಗಸಿರಿ ದಸರಾ ಯಕ್ಷ ಪಯಣ' - ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು

‘ರಂಗಸಿರಿ ದಸರಾ ಯಕ್ಷ ಪಯಣ’ – ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು

ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಬದಿಯಡ್ಕ ಕೇಂದ್ರೀಕರಿಸಿಕೊಂಡು ನಾಡುನುಡಿ ಸಂರಕ್ಷಣೆಯ ಹಲವಾರು ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಸ್ಥೆಯು ಈ ವರ್ಷವೂ  ‘ರಂಗಸಿರಿ ದಸರಾ ಯಕ್ಷ ಪಯಣ’ ನಡೆಸಲಿದೆ.

ಸೆಪ್ಟೆಂಬರ್ 27 ರಿಂದ  ಅಕ್ಟೋಬರ್ 4ವರೆಗೆ ಪ್ರತಿದಿನವೂ ರಂಗಸಿರಿ ತಂಡದಿಂದ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಪ್ರತಿದಿನವೂ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ,ಶಾಲೆಯ ಜೊತೆಗೆ ಯಕ್ಷಗಾನ ಪ್ರದರ್ಶನಗಳನ್ನೂ ನಿಭಾಯಿಸುವ ಶಕ್ತಿಯನ್ನು ನೀಡಲಿದೆ.

ಆ ಮೂಲಕ ಮೇಳ ತಿರುಗಾಟದ ಪುಟ್ಟ ಅನುಭವವೂ ದೊರಕುತ್ತದೆ.  ನಾಡಹಬ್ಬ ದಸರಾ ಪ್ರಯುಕ್ತ ಗಡಿನಾಡಿನಿಂದ “ರಂಗಸಿರಿ ದಸರಾ ಯಕ್ಷ ಪಯಣ” ಗಮನಾರ್ಹವಾಗಿದೆ.

 26-9-2022ರಂದು ಸಂಜೆ 4ಗಂಟೆಗೆ ಬದಿಯಡ್ಕದ ನವಜೀವನ ರಸ್ತೆಯಲ್ಲಿನ ರಾಮಲೀಲಾದಲ್ಲಿ ಪಯಣದ ಉದ್ಘಾಟನೆ ಮತ್ತು ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ನಾಡಿನ ಹಲವಾರು ಕವಿಗಳು ಪಾಲ್ಗೊಳ್ಳಲಿದ್ದಾರೆ. 

ರಂಗಸಿರಿ ದಸರಾ ಯಕ್ಷ ಪಯಣ ಕಾರ್ಯಕ್ರಮಗಳ ವಿವರ:

 27/09/2022ರಂದು ಸಂಜೆ 5.30-8.30 ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸುಂದೋಪಸುಂದ ಕಾಳಗ, ಇಂದ್ರಜಿತು ಕಾಳಗ ಪ್ರದರ್ಶನ ನಡೆಯಲಿದೆ.

28/09/2022- ಸಂಜೆ6:00-9:00- ಮಾಣಿಲ ಶ್ರೀಧಾಮ-ಅತಿಕಾಯ ಮೋಕ್ಷ, ಸುಧನ್ವ ಮೋಕ್ಷ

29/09/2022- ಸಂಜೆ 7:00-9:00- ಹೊಸಂಗಡಿ ರಕ್ತೇಶ್ವರಿ ಸನ್ನಿಧಿ-ಮೀನಾಕ್ಷಿ ಕಲ್ಯಾಣ.

30/09/2022- ಸಂಜೆ 6:00-9:00- ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನ –  ಮುರಾಸುರ ವಧೆ.

1/10/2022- ಸಂಜೆ 6:00-8:30- ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳ-ಏಕಾದಶೀ ದೇವಿ ಮಹಾತ್ಮೆ.

2-102022- ಸಂಜೆ 6:00-9:00- ಶ್ರೀಧಾಮ ಮಾಣಿಲ- ಗಂಧರ್ವ ಮೋಕ್ಷ, ಇಂದ್ರಜಿತು ಕಾಳಗ

03/10/2022- ರಾತ್ರಿ 8:00-10:30- ಶ್ರೀಸದನ ಶುಳುವಾಲುಮೂಲೆ-ಏಕಾದಶೀ ದೇವಿ ಮಹಾತ್ಮೆ.

04/10/2022- ಬೆಳಗ್ಗೆ 9:30-12:30- ದುರ್ಗಾಲಯ ಜೋಡುಕಲ್ಲು -ಮೀನಾಕ್ಷಿ ಕಲ್ಯಾಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments