ಜೋಧ್‌ಪುರದ ವ್ಯಕ್ತಿಯೊಬ್ಬ ತನ್ನ ಕಾರಿಗೆ ನಾಯಿಯನ್ನು ಸರಪಳಿಯಲ್ಲಿ ಬಂಧಿಸಿ ಎಳೆದಾಡಿದ ನಂತರ ಆತನ ವಿರುದ್ಧ ಪ್ರಾಣಿಹಿಂಸೆ ಪ್ರಕರಣ ದಾಖಲಾಗಿದೆ.
ಪ್ರಾಣಿ ಹಿಂಸೆಯ ಭೀಕರ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಕಾರಿಗೆ ನಾಯಿಯನ್ನು ಕಟ್ಟಿ ನಿಷ್ಕರುಣೆಯಿಂದ ನಗರದಾದ್ಯಂತ ಎಳೆದಾಡಿದ್ದಾನೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಬೈಕ್‌ನಲ್ಲಿ ಬಂದ ದಾರಿಹೋಕರೊಬ್ಬರು ಪ್ರಾಣಿ ಹಿಂಸೆಯನ್ನು ಕಂಡು ತಕ್ಷಣ ಅಡ್ಡಗಟ್ಟಿ ಕಾರು ನಿಲ್ಲಿಸುವಂತೆ ಮಾಡಿದರು. ನಾಯಿಯ ಸರಪಳಿ ಬಿಚ್ಚಿದ ಅವರು ಘಟನೆಯ ಬಗ್ಗೆ ನಗರದ ಡಾಗ್ ಹೋಮ್ ಫೌಂಡೇಶನ್‌ಗೆ ಮಾಹಿತಿ ನೀಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಸ್ಥಳೀಯರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆರೋಪಿಯನ್ನು ಡಾ ರಜನೀಶ್ ಗಾಲ್ವಾ ಎಂದು ಗುರುತಿಸಲಾಗಿದ್ದು, ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.
ತಮ್ಮ ಮನೆಯ ಸಮೀಪವೇ ಬೀದಿ ನಾಯಿ ವಾಸವಿದ್ದು, ಅದನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ನಗರದ ಡಾಗ್ ಹೋಮ್ ಫೌಂಡೇಶನ್ ಜೋಧಪುರ ವೈದ್ಯರ ವಿರುದ್ಧ ಪ್ರಾಣಿಹಿಂಸೆ ಪ್ರಕರಣ ದಾಖಲಿಸಿದೆ. ವೈದ್ಯರ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಜೋಗೇಂದ್ರ ಸಿಂಗ್ ತಿಳಿಸಿದ್ದಾರೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
