ಪುತ್ತೂರು, ಸೆ 15: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೆಮೆಸ್ಟ್ರಿ ಫೆಸ್ಟ್ ಪ್ರಯುಕ್ತ ಆಯೋಜಿಸಲಾದ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಡಾಕ್ಯುಮೆಂಟರಿ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನವಿಭಾಗದ ಲಕ್ಷ್ಮಿ ಅರ್ಪಣ್ ಪ್ರಥಮ ಸ್ಥಾನ, ನಿಧಿ ಬೇಟೆ(ಟ್ರೇಷರ್ ಹಂಟ್) ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ದೀಪ್ತಿ ಲಕ್ಷ್ಮಿ ದ್ವಿತೀಯ ಸ್ಥಾನ,
ಸ್ಕ್ರಿಪ್ಟ್ ಬರವಣಿಗೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ ಎ ಕೆ ದ್ವಿತೀಯ ಸ್ಥಾನ, ಪೋಟೊಗ್ರಾಫಿ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅದಿತ್ ಆಂಚನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಂಕಿತಾ ಎಂ, ಶಶಾಂಕ್ ವಿ ಎಸ್, ಯಶಸ್ ಜಿ, ಅಚಲ ಪಟೇಲ್, ಪ್ರತೀಕ್ಷಾ ಎ.ಕೆ, ಅನೀಶ್ ಪಜಿಮಣ್ಣು, ಲಕ್ಷ್ಮಿ ಅರ್ಪಣ್ , ನೇಹಾ ಭಟ್, ಮನಸ್ವಿ ಭಟ್, ಅದಿತ್ ಆಂಚನ್ , ಸಾತ್ವಿಕ ಎಂ, ಭಾರ್ಗವಿ ಬಿ ಎಸ್, ಅಂಜಲಿ ವಿ, ಅಶ್ವಿತ್ ರೈ ಎನ್, ಶ್ರುಜೇಶ್ ಕುಮಾರ್, ಪಿ.ಜಿ. ಅಯುಷ್ ರೈ, ಲಕ್ಷಿತ್, ದೀಪ್ತಿ ಲಕ್ಷ್ಮಿರವರ ತಂಡವು ತೃತೀಯ ಸ್ಥಾನವನ್ನು ಪಡೆದಿದೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು