ಕೆಲವೊಮ್ಮೆ ಅನೈತಿಕ ದೈಹಿಕ ಸಂಬಂಧಗಳು ಮತ್ತು ಲೈಂಗಿಕತೆಯ ಅತಿಯಾದ ಆಸಕ್ತಿ ಮನುಷ್ಯನನ್ನು ಎಂತಹಾ ಕೆಲಸಗಳಿಗೂ ಪ್ರಚೋದಿಸುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲೊಂದು ಪ್ರಕರಣವೂ ಅದೇ ರೀತಿ ಇದೆ.
ಮಾಂಗಲ್ಯ ಕಟ್ಟಿದ ಗಂಡನನ್ನೇ ಕೊಂದು ಪಿಟ್ಸ್ ರೋಗದಿಂದ ಸತ್ತ ಎಂದು ಪ್ರಚಾರ ಮಾಡಿದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಕೊನೆಗೂ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಮಹೇಶ್ ಎಂಬಾತನನ್ನು ಆತನ ಪತ್ನಿಯಾದ ಶಿಲ್ಪಾ ಮತ್ತು ಆಕೆಯ ಪ್ರಿಯತಮ ಸೇರಿಕೊಂಡು ಕೊಲೆ ಮಾಡಿದ್ದಾರೆ.
ಆಮೇಲೆ ಮೂರ್ಛೆರೋಗ ಬಂದು ಮೃತಪಟ್ಟಿದ್ದಾನೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆಮೇಲೆ ಶವವನ್ನು ತಮ್ಮ ಊರಾದ ಮಂಡ್ಯಕ್ಕೆ ತಂದು ಮೂರ್ಛೆರೋಗದ ಕಟ್ಟುಕತೆ ಹೆಣೆದಿದ್ದಾಳೆ.
ಆದರೆ ಆಕೆಯ ಮಾತುಗಳಲ್ಲಿ ನಾಟಕದ ಛಾಯೆಯನ್ನು ಕಂಡ ಮಹೇಶನ ಮನೆಯವರು ಮೃತದೇಹವನ್ನು ಪರೀಕ್ಷೆ ಮಾಡಿದರು. ಆಗ ಅವರಿಗೆ ಮೃತ ಮಹೇಶನ ದೇಹದಲ್ಲಿ ಗಾಯಗಳ ಗುರುತುಗಳು ಕಂಡುಬಂದುವು. ಇದರಿಂದ ಮತ್ತಷ್ಟು ಅನುಮಾನಗೊಂಡ ಅವರು ಪೊಲೀಸರಿಗೆ ದೂರು ನೀಡಿದರು.
ಕೂಡಲೇ ಪೋಷಕರು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಯಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹೇಶ ಕೊಲೆಯಾದುದು ದೃಢಪಟ್ಟಿದೆ.
ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣನಕುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಮೃತ ಮಹೇಶನ ಪತ್ನಿ ಶಿಲ್ಪಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

