ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಬೆಳ್ತಂಗಡಿ ಆಶಾ ಸಾಲಿಯಾನ್ ಸಭಾಭವನದಲ್ಲಿ ಜರುಗಿದ 12ನೆ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವದ ಸಂದರ್ಭದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಸನ್ಮಾನಿಸಲಾಯಿತು.ಕರ್ನಾಟಕ ವಿಧಾನ ಪರಿಷತ್ತಿನ ಶಾಸಕ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ , ರಂಜನ್. ಜಿ ಗೌಡ ಮತ್ತು ಸಮಿತಿಯ ಪದಾಧಿಕಾರಿಗಳು ಸಾಧಕರನ್ನು ಗೌರವಿಸಿದರು.
ಬೆಳ್ತಂಗಡಿ ತಾಲೂಕು ಗೇರುಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕವಿ ವಿಷ್ಣುಶರ್ಮ ವಿರಚಿತ ಗಣೇಶ ಮಹಾತ್ಮೆ ತಾಳಮದ್ದಳೆಯು ಕಳಿಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಭಾಗವತರಾಗಿ ಆನೆಕಲ್ಲು ಗಣಪತಿ ಭಟ್, ಹಿಮ್ಮೇಳದಲ್ಲಿ ಗಣೇಶ್ ಕಾರಂತ್ ಬಿ.ಸಿ ರೋಡು, ಶಿವಪ್ರಸಾದ್ ಕಾವಲ್ ಕಟ್ಟೆ, ರೋಹಿತ್ ವಾಮದಪದವು ಅರ್ಥಧಾರಿಗಳಾಗಿ ರಾಘವೇಂದ್ರ ಆಸ್ರಣ್ಣ ನಾಳ, ದಿವಾಕರ ಆಚಾರ್ಯ ಗೇರುಕಟ್ಟೆ, ಮಧೂರು ಮೋಹನ ಕಲ್ಲೂರಾಯ, ಶಿವಾನಂದ ಭಂಡಾರಿ ಪಣೆಜಾಲು,ರಾಘವ.ಹೆಚ್,ಸಂಜೀವ ಪಾರೇಂಕಿ ಭಾಗವಹಿಸಿದ್ದರು.
ಸ್ವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು . ಸಮಿತಿಯ ಉಪಾಧ್ಯಕ್ಷ ರಾಘವ. ಹೆಚ್ ಸ್ವಾಗತಿಸಿ ವಂದಿಸಿದರು.