ಹೌದು. ಈ ಸುದ್ದಿ ನಿಜ. ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಸುಪ್ರಸಿದ್ಧ, ಗಣ್ಯ ಕಲಾವಿದರೆಲ್ಲಾ ಕಟೀಲು ಕ್ಷೇತ್ರದತ್ತ ಪಯಣಿಸಲಿದ್ದಾರೆ. ಯಾಕೆ ಎಂದು ಆಶ್ಚರ್ಯಪಡಬೇಡಿ.
ಪ್ರತಿವರ್ಷದಂತೆ ಈ ವರ್ಷವೂ ಕಟೀಲು ಸರಸ್ವತೀ ಸದನದಲ್ಲಿ ಅಮೋಘ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಸೆಪ್ಟೆಂಬರ್ 5ರಿಂದ 11ರ ವರೆಗೆ ನಡೆಯುವ ಹದಿನೆಂಟನೇ ವರ್ಷದ ಈ ಸಪ್ತಾಹದಲ್ಲಿ “ಗೃಹಣೀ ಗೃಹಮುಚ್ಯತೇ” ಎಂಬ ಆಖ್ಯಾನಕ್ಕೆ ಸಂಬಂಧಪಟ್ಟ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ತಾಳಮದ್ದಳೆ ಪ್ರತಿದಿನ ಸಂಜೆ 4 ಘಂಟೆಗೆ ಆರಂಭವಾಗಲಿದೆ. ಸೆಪ್ಟೆಂಬರ್ 5ರಿಂದ ಮೊದಲ್ಗೊಂಡು 11ರ ವರೆಗೆ “ಗಿರಿಜೆ, ಕಯಾದು, ಸುಕನ್ಯೆ, ಸಾವಿತ್ರೀ, ಚಂದ್ರಮತೀ, ಸೀತೆ, ರುಕ್ಮಿಣೀ, ತಾರೆಯರು” ಎಂಬ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಪೂರ್ವಾಹ್ನ ಮತ್ತು ಅಪರಾಹ್ನ ಸೇರಿದಂತೆ ಎರಡು ತಾಳಮದ್ದಳೆ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಚಿತ್ರ ನೋಡಿ.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ