Saturday, January 18, 2025
Homeಸುದ್ದಿIndia Book of Records ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ...

India Book of Records ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುವಿನ ದಾಖಲೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುಳ ಹೆಸರು  India Book of Records ನಲ್ಲಿ ದಾಖಲಾಗಿದೆ.

ಇವಳ ವಯಸ್ಸು 3ವರ್ಷ, 8ತಿಂಗಳು. ಅತೀಕಿರಿಯ ವಯಸ್ಸಿನಲ್ಲಿ ಈಕೆ 35 ಹಣ್ಣುಗಳ, 16 ಬಣ್ಣಗಳ, ಹೆಸರನ್ನು ಗುರುತಿಸಿರುತ್ತಾಳೆ. 2 ಶ್ಲೋಕ, 4  Rhymes, ದೇಹದ 20 ಅಂಗಗಳ ಹೆಸರುಗಳನ್ನು ಗುರುತಿಸಿ 8 ರಾಷ್ಟ್ರ ಲಾಂಛನವನ್ನು ಗುರುತಿಸಿದ ಸಾಧನೆ ಈಕೆಯದು.

ಅನ್ವಿಕಾ ಪ್ರಭು ಪುತ್ತೂರು ಕೋಡಿಂಬಾಡಿಯ ನಿವಾಸಿ ಶ್ರೀ ಅಶೋಕ್ ಪ್ರಭು.ಡಿ.ಕೆ ಹಾಗೂ ಶ್ವೇತಾ ಪ್ರಭು ಇವರ ಪುತ್ರಿ.


3 ವರ್ಷ 8 ತಿಂಗಳ ಅತಿ ಕಿರಿಯ ವಯಸ್ಸಿನಲ್ಲಿ India Book of Records ನಲ್ಲಿ ಈಕೆಯ ಹೆಸರು ದಾಖಲೆಯಾಗಿದೆ ಹಾಗೂ ನಮ್ಮ ಶಾಲೆಯ ಇತಿಹಾಸದಲ್ಲಿ ಇದೊಂದು ವಿಶಿಷ್ಠ ಸಾಧನೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments