ವಿಶ್ವಸುಂದರಿ ಸ್ಪರ್ಧಾ ನಿಯಮಗಳಲ್ಲಿ ಮಹತ್ತರವಾದ ಬದಲಾವಣೆ ಮಾಡಲಾಗಿದೆ. 2023 ರಿಂದ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಈ ಹಿಂದೆ ಅವಿವಾಹಿತರಿಗೆ ಮತ್ತು 18 ರಿಂದ 28 ವರ್ಷದೊಳಗಿನ ಮಕ್ಕಳಿಲ್ಲದ ಮಹಿಳೆಯರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ವಿಜೇತರಾದವರು ಕೂಡಾ ಮುಂದಿನ ವಿಶ್ವಸುಂದರಿ ಸ್ಪರ್ಧೆ ನಡೆಯುವ ವರೆಗೆ ಅವಿವಾಹಿತರಾಗಿ ಉಳಿಯಬೇಕಿತ್ತು ಮತ್ತು ಮಕ್ಕಳನ್ನು ಹೊಂದುವಂತಿರಲಿಲ್ಲ.



ವಿಶ್ವ ಸುಂದರಿ ಐಶ್ವರ್ಯ ರೈ ತನ್ನ ಮಾಡೆಲಿಂಗ್ ನ ದಿನಗಳಲ್ಲಿ..
ಸೌಂದರ್ಯ ಸ್ಪರ್ಧೆಯಲ್ಲಿ ಮೊದಲು ಅವಿವಾಹಿತರು ಮತ್ತು 18 ರಿಂದ 28 ವರ್ಷದೊಳಗಿನ ಮಕ್ಕಳಿಲ್ಲದ ಮಹಿಳೆಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು.
ಈಗ, ಈ ಎಲ್ಲಾ ನಿಯಮಗಳಿಗೆ ಅಂತ್ಯವನ್ನು ಹಾಕುವ ಮೂಲಕ, ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು ಇದೀಗ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ 2023 ರಿಂದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲು ನಿರ್ಧರಿಸಿದೆ.