ಪುತ್ತೂರು,ಅ 17: ದಕ್ಷಿಣ ಕನ್ನಡ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಇದರ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದೆ.
ಅದೇ ರೀತಿ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಗಣಪತಿ ಭಟ್ ಪಿ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಅಖಿಲೇಶ್ ವರ್ಮ ,ವಿಘ್ನೇಶ್ ಚಂದ್ರಕಾಂತ್ ಯಾದವ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಲವಿತ್ ಎಂ ಭಾಗವಹಿಸಿದ್ದರು.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪುಣ್ಯ ಪಿ. ಎನ್ ,ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರಾವ್ಯ ಮತ್ತು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ತೃಪ್ತಿ, ನೇಹಾಲ್ ಎಸ್ ಎಂ ಭಾಗವಹಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
- ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಗುಂಡಿನ ದಾಳಿ – ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ
- ಪತ್ನಿ ಹತ್ಯೆ ಪ್ರಕರಣ, ಯುಎಸ್ಎ ಯಲ್ಲಿ ಪತಿ ನರೇಶ್ ಭಟ್ ಬಂಧನ – ಗಂಡ ಯಾವಾಗ ಮರುವಿವಾಹ ಆಗಬಹುದು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಆರೋಪಿ
- ವಿಟ್ಲದ ರಿಕ್ಷಾ ಚಾಲಕ ನಾಪತ್ತೆ – ಉಪ್ಪಿನಂಗಡಿಯಲ್ಲಿ ನಿಂತುಕೊಂಡಿರುವ ಖಾಲಿ ರಿಕ್ಷಾ
- ಯಕ್ಷಗಾನದ ಹಿರಿಯ ಭಾಗವತ ನಿಧನ
- ಹವ್ಯಾಸಿ ಯಕ್ಷಗಾನ ತಂಡಗಳ ಬಹುದೊಡ್ಡ ಸಮಾಗಮ