ಯಕ್ಷಗಾನ ಎಂದೂ ಅಳಿಯುವುದಿಲ್ಲ. ಕೋವಿಡ್ ಕಾಲದಲ್ಲಿ ಮುಗಿಯಿತು ಎಂದು ಭಾವಿಸಿದರೂ ಕೋವಿಡ್ ನಂತರ ಯಕ್ಷಗಾನ ಮತ್ತೂ ಹೆಚ್ಚು ಮೆರೆಯುತ್ತಿದೆ. ಹಲವಾರು ಯುವ ಪ್ರತಿಭೆಗಳು ಮಿಂಚುತ್ತಿದ್ದಾರೆ. ಯಾವನೇ ಕಲಾವಿದ ತಾನು ಕಲಾವಿದನಾಗಿ ರೂಪುಗೊಳ್ಳಲು ಸಮಗ್ರ ಅದ್ಯಯನ ಅಗತ್ಯ.
ಅದ್ಯಯನದ ಕೊರತೆ ಯುವ ಕಲಾವಿದರಲ್ಲಿ ಕಾಣುತ್ತದೆ. ಪುರಾಣ ಕಥೆಗಳನ್ನು ಓದಿ ಅದರ ಎಲ್ಲಾ ವಿಚಾರಗಳನ್ನು ಮನದಟ್ಟು ಮಾಡುವುದು ಅಗತ್ಯ. ಇಂದಿನ ಯುವ ಪೀಳಿಗೆ ಮೌಲ್ಯವರಿತು ಮುನ್ನಡೆಯ ಬೇಕು.
ಯಕ್ಷಗಾನವನ್ನು ಬೆಳೆಸುವ ಯೋಚನೆಯಲ್ಲಿ ಸಿರಿಬಾಗಿಲು ಪ್ರತಿಷ್ಠಾನವು ಹಲವಾರು ಯೋಜನೆ ಯೋಚನೆಯಿಂದ ಬೃಹತ್ ಸಾಂಸ್ಕೃತಿಕ ಭವನ ನಿರ್ಮಾಣಮಾಡಿ ಪ್ರಯತ್ನಿಸುತ್ತಿದೆ. ಸಂಪೂರ್ಣ ಯಶಸ್ವಿ ಗೊಳಿಸುವ ಭರವಸೆ ಮೂಡಿಸಿದ್ದಾರೆ ಶ್ರೀಯುತ ಮಯ್ಯರು. ಇನ್ನೂ ಬೆಳಗಲಿ ಎಂದು ಯಕ್ಷಗಾನ ಸಂಘಟಕರು- ಕಲಾವಿದರೂ ಆದ ಶ್ರೀ ಯಸ್.ಯನ್.ಪಂಜಾಜೆ ಯವರು ಪ್ರತಿಷ್ಠಾನದ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ದ ನಾಲ್ಕನೇ ಕಾರ್ಯಕ್ರಮ ದೀಪ ಬೆಳಗಿಸಿ ಶುಭ ಹಾರೈಸಿದರು.
ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇದರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಹೊಳ್ಳ ವೇದಿಕೆಲ್ಲಿ ಟ್ರಸ್ಟ್ ನ 680 ತಾಳಮದ್ದಳೆ ಕುರಿತಾಗಿಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ವಕೀಲರಾದ ಶ್ರೀ ಪದ್ಮನಾಭ ಹೊಳ್ಳ ನೀರಾಳ, ಸಿರಿಬಾಗಿಲು ನಿರೂಪಿಸಿದರು.
ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇವರಿಂದ ಪಾರ್ಥ ಸಾರದ್ಯ ತಾಳಮದ್ದಳೆ ನಡೆಯಿತು. ರವಿಶಂಕರ್ ಮಧೂರು, ರಾಮ ಹೊಳ್ಳ ಸುರತ್ಕಲ್, ಸುದರ್ಶನ ಕಲ್ಲೂರಾಯ ಹಿಮ್ಮೇಳ ದಲ್ಲಿ ಸಹಕರಿಸಿದರೆ, ಕೃಷ್ಣ ನಾಗಿ ಪ್ರಶಾಂತ್ ಹೊಳ್ಳ,
ಕೌರವ -ಕಾಸರಗೋಡು ಸುಬ್ರಾಯ ಹೊಳ್ಳ.
ಬಲರಾಮ-ಗುಂಡ್ಯಡ್ಕ ಈಶ್ವರ ಭಟ್
ಅರ್ಜುನ-ಕುಶಲಾಕ್ಷಿ ಮುಡಿಪು ಭಾಗವಹಿಸಿದರು.
