ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿವೇಕಾನಂದ ಇಂಟರಾಕ್ಟ್ ಕ್ಲಬ್ ಪುತ್ತೂರು ಪೂರ್ವ ಇದರ ಪದಗ್ರಹಣ ಸಮಾರಂಭವು ದಿನಾಂಕ 03-08-2022ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
Installing Officer ಆಗಿ ರೋ.ಚಂದ್ರಶೇಖರ್.ಎಸ್ ಅವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. 10ನೇ ತರಗತಿಯ ಕು.ತನ್ವಿ ಶೆಣೈ ವಿವೇಕಾನಂದ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆಯಾಗಿ ಹಾಗೂ 10ನೇ ತರಗತಿಯ ಧನ್ವಿನ್.ಕೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಸುಮಾರು 35 ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ ನ ಸದಸ್ಯರಾಗಿ ಸೇರ್ಪಡೆಯಾದರು.
ರೋ.ಚಂದ್ರಶೇಖರ್.ಎಸ್. Installing Officer ನ ನೆಲೆಯಲ್ಲಿ ಮಾತನಾಡಿ, ನೂತನ ವಿವೇಕಾನಂದ ಇಂಟರಾಕ್ಟ್ ಕ್ಲಬ್‌ಗೆ ಹಾಗೂ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಅಸಿಸ್ಟೆಂಟ್ ಗವರ್ನರ್ ರೋ.ಜಗಜೀವನದಾಸ್ ರೈ ರೋಟರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಶುಭ ಹಾರೈಸಿದರು.
ನೂತನ ವಿವೇಕಾನಂದ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಕು.ತನ್ವಿ ಶೆಣೈ ಮಾತನಾಡಿ ತನ್ನ ನೂತನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದಳು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್.ಎಂ ಹಾಗೂ ಸಂಚಾಲಕ ಶ್ರೀ ರವಿನಾರಾಯಣ.ಎಂ ಸಂದರ್ಭೋಚಿತವಾಗಿ ಮಾತನಾಡಿದರು. ವಿವೇಕಾನಂದ ಇಂಟರಾಕ್ಟ್ ಕ್ಲಬ್ ನ ಸಂಯೋಜಕಿ ಶ್ರೀಮತಿ ಶಾಂತಿರಾವ್ ಇವರು ಕ್ಲಬ್‌ನ ಉದ್ಧೇಶ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರೋ. ಶಶಿಧರ್ ಕಿನ್ನಿಮಜಲು ಮತ್ತು ರೋ.ಶಶಿಕಿರಣ ರೈ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಪುತ್ತೂರು ಪೂರ್ವ ಹಾಗೂ ವಿವೇಕಾನಂದ ಇಂಟರಾಕ್ಟ್ ಕ್ಲಬ್ ನ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವು ನಡೆಯಿತು. ರೋ.ಕೆ.ವಿಶ್ವಾಸ ಶೆಣೈ ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವದ ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.
ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಶ್ರೀ ಶರತ್‌ಕುಮಾರ್ ರೈ ಅವರು ಸ್ವಾಗತಿಸಿ, ಕು. ತೇಜ ಚಿನ್ಮಯ ಹೊಳ್ಳ ಪ್ರಾರ್ಥಿಸಿ, ಕಾರ್ಯದರ್ಶಿ ಕು.ಧನ್ವಿನ್.ಕೆ ವಂದಿಸಿದನು. ಕು.ಶುಭನ್ ಶೆಣೈ ಮತ್ತು ಕು.ನೇಹಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.