Saturday, October 5, 2024
Homeಸುದ್ದಿರಾಷ್ಟ್ರಪತಿ ಚುನಾವಣೆ : ಬೆಳಗ್ಗೆ 11 ಗಂಟೆಗೆ ಮತಗಳ ಎಣಿಕೆ; ದ್ರೌಪದಿ ಮುರ್ಮು, ಯಶವಂತ ಸಿನ್ಹಾ...

ರಾಷ್ಟ್ರಪತಿ ಚುನಾವಣೆ : ಬೆಳಗ್ಗೆ 11 ಗಂಟೆಗೆ ಮತಗಳ ಎಣಿಕೆ; ದ್ರೌಪದಿ ಮುರ್ಮು, ಯಶವಂತ ಸಿನ್ಹಾ ಕಣದಲ್ಲಿ

ಅಧ್ಯಕ್ಷರ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ,ಇಂದು ಬೆಳಗ್ಗೆ 11 ಗಂಟೆಗೆ ಮತಗಳ ಎಣಿಕೆ ನಡೆಯಲಿದ್ದು ದ್ರೌಪದಿ ಮುರ್ಮು, ಯಶವಂತ ಸಿನ್ಹಾ ಕಣದಲ್ಲಿದ್ದಾರೆ.

ಜುಲೈ 18 ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ 771 ಸಂಸದರು ಮತ್ತು 4025 ಶಾಸಕರನ್ನು ಒಳಗೊಂಡ ಮತದಾನದಲ್ಲಿ 99% ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ.

ಈ ಚುನಾವಣೆಯು NDA ಯ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವಿನ ನೇರ ಮುಖಾಮುಖಿಯಾಗಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.

ದ್ರೌಪದಿ ಮುರ್ಮು ಗೆದ್ದರೆ ಭಾರತದ ರಾಷ್ಟ್ರಪತಿಯಾಗುವ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments