ಇತ್ತೀಚೆಗಿನ ವರದಿಯ ಪ್ರಕಾರ ಬೈತಡ್ಕ ಗೌರಿ ಹೊಳೆ ಅಪಘಾತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿದೆ. ಇಬ್ಬರಲ್ಲಿ ಓರವನ ಮೃತದೇಹ ಇಂದು ಬೆಳಗ್ಗೆ 8 ಘಂಟೆಗೆ ಪತ್ತೆಯಾಗಿದೆ.
ಬೈತಡ್ಕ ಗೌರಿಹೊಳೆ ಸೇತುವೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಹೊಳೆಗೆ ಬಿದ್ದಿದ್ದ ಭಾರೀ ಗಾತ್ರದ ಮರವೊಂದರಲ್ಲಿ ಸಿಕ್ಕಿಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.ನಿನ್ನೆಯ ವರೆಗೆ ಹೋಳೆ ತುಂಬಿ ಹರಿಯುತ್ತಿದ್ದುದರಿಂದ ಆ ಮರದ ದಿಮ್ಮಿ ಕಾಣಿಸುತ್ತಿರಲಿಲ್ಲ.
ಇಂದು ಮಳೆಯ ಜೊತೆಗೆ ಹೊಳೆಯ ನೀರಿನ ಮಟ್ಟವೂ ಕಡಿಮೆಯಾಗಿದೆ. ಆದ್ದರಿಂದ ಆ ಮರದ ದಿಮ್ಮಿಯಲ್ಲಿ ನೇತಾಡುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಮರಕ್ಕಡದ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹರಿಯುತ್ತಿದ್ದ ಹೊಳೆಯಲ್ಲಿ ಇದ್ದ ಮರದ ಕೊಂಬೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೊದಲ ಮೃತದೇಹ ಪತ್ತೆಯಾದ 50 ಮೀಟರ್ ದೂರದಲ್ಲಿ ಇನ್ನೊಂದು ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಜನರಿಗೆ ಈಗ ಎರಡನೇ ಮೃತದೇಹವೂ ಕಾಣಸಿಕ್ಕಿದೆ.
ಪೊಲೀಸ್ ಇಲಾಖೆಯವರು ಆಗಮಿಸಿದ್ದು ಮೃತದೇಹವನ್ನು ಮೇಲೆತ್ತಿ ಶವಪರೀಕ್ಷೆಗೆ ಕಳುಹಿಸುವ ಕಾರ್ಯ ಇನ್ನಷ್ಟೇ ಆಗಬೇಕಾಗಿದೆ.