ಜೂನ್ 23ರ ಗುರುವಾರ ಸಂಜೆ ಮೂಲ್ಕಿಯ ಪದ್ಮನೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ ದಾರುಣ ಘಟನೆ ನಡೆದಿದೆ. ಎಲ್ಲಾ ಮಕ್ಕಳು ಕೊಲ್ಲಲ್ಪಟ್ಟರು. ಅವರ ಪತ್ನಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನ ಮೂಲ್ಕಿ ಸಮೀಪದ ಪದ್ಮನೂರಿನ ಹಿತೇಶ್ ಶೆಟ್ಟಿಗಾರ್ (42) ಆರೋಪಿ.ಮೃತ ಮಕ್ಕಳು ರಶ್ಮಿತಾ (13), ಉದಯ್ (11) ಮತ್ತು ದಕ್ಷಿತ್ (4) ಮತ್ತು ಪತ್ನಿ ಲಕ್ಷ್ಮಿ ಬದುಕುಳಿದಿದ್ದಾಳೆ. ಆರೋಪಿ ಹಿತೇಶ್ ಶೆಟ್ಟಿಗಾರ್ ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಹಾಗಾದರೆ ಆರೋಪಿ ಹಿತೇಶ್ ಶೆಟ್ಟಿಗಾರ್ ಪತ್ನಿ ಮಕ್ಕಳನ್ನು ಬಾವಿಗೆ ತಳ್ಳಿ ಅವರ ಜೊತೆಗೆ ತಾನೂ ಬಾವಿಗೆ ಹಾರಲು ಕಾರಣವೇನು? ಕೌಟುಂಬಿಕ ಸಮಸ್ಯೆ ಘಟನೆಗೆ ಕಾರಣ ಎನ್ನಲಾಗಿದ್ದು, ಮಕ್ಕಳನ್ನು ಬಾವಿಗೆ ತಳ್ಳಿದ ಬಳಿಕ ವಿಜೇಶ್ ಶೆಟ್ಟಿಗಾರ್ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಒಟ್ಟಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆದರೆ ಸ್ಥಳೀಯರು ತಕ್ಷಣ ಧಾವಿಸಿ ವಿಜೇಶ್ ಮತ್ತು ಆತನ ಪತ್ನಿಯನ್ನ ರಕ್ಷಿಸಿದರೂ ಮೂವರು ಮಕ್ಕಳು ಮಾತ್ರ ಅದಾಗಲೇ ಸಾವನ್ನಪ್ಪಿದ್ದರು.ವಿಜೇಶ್ ಪದ್ಮನ್ನೂರು ಬಳಿ ಹೂವಿನ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ.
ಹೂವಿನ ವ್ಯಾಪಾರ ಅಷ್ಟಾಗಿ ಇರದಿದ್ದುದರಿಂದ ಕೂಲಿ ಕೆಲಸಕ್ಕೂ ಹೋಗುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚಿಗೆ ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ. ಆತನು ಕೆಲಸಕ್ಕೆ ಹೋಗದಿದ್ದುದರ ಬಗ್ಗೆ ಪತ್ನಿ ಆಗಾಗ ಆಕ್ಷೇಪಿಸುತ್ತಿದ್ದಳು. ಇದರಿಂದ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಸ್ಥಳೀಯರು ಆಡಿಕೊಳ್ಳುವ ಮಾತು.
ಹೀಗೆ ಕೌಟುಂಬಿಕ ಸಮಸ್ಯೆ, ಆದಾಯದ ಕೊರತೆ, ಕುಟುಂಬಿಕ ಕಲಹಗಳೇ ಈ ಕೃತ್ಯಕ್ಕೆ ಹೇತು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಆದರೆ ಮುಗ್ಧ ಮಕ್ಕಳು ಏನು ತಪ್ಪು ಮಾಡಿದ್ದರು? ಅವರು ಹೇಗಾದರೂ ಬದುಕಿಕೊಳ್ಳುತ್ತಿದ್ದರು. ತನ್ನ ಪುಟ್ಟ ಮಕ್ಕಳನ್ನೇ ಬಾವಿಗೆ ತಳ್ಳುವ ಹೀನ ಮನಸ್ಥಿತಿಯವನಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಸಾರ್ವಜನಿಕರ ಅಭಿಪ್ರಾಯ.