ಭೀಕರ ಅಪಘಾತವೊಂದರಲ್ಲಿ ಕಾರು ಮತ್ತು ಬಸ್ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನಿಂದ ವರದಿಯಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಅಂದರೆ ಸೋಮವಾರ ಬೆಳಗ್ಗೆ ಸುಮಾರು 5:30ರ ವೇಳೆ ಈ ಭೀಕರ ಅಪಘಾತ ನಡೆದಿದೆ. ಇದು ನಡೆದದ್ದು ಜಿಲ್ಲೆಯ ಗುಬ್ಬಿ ತಾಲೂಕು ದೊಡ್ಡಗುಣಿ ಕೆರೆ ಏರಿ ಹತ್ತಿರ.

ಬಸ್‌ನಲ್ಲಿದ್ದ 5 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗುಬ್ಬಿ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.