ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ರಥೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇಯ ದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಕಲಾವಿದರಾದ ಶಿವಾನಂದ ಕೋಟ, ಶಶಿಕಾಂತ ಶೆಟ್ಟಿ, ಪರಮೇಶ್ವರ ಭಂಡಾರಿ ಇವರಿಗೆ ಕಲಾ ಪೋಷಕರಾದ ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಗೌರವಿಸಿದರು.
ದೇವಾಲಯಗಳೇ ಕಲೆಗಳಿಗೆ ಆಶ್ರಯತಾಣ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಶಾಸ್ತ್ರೀಯ ಹಾಗೂ ಪರಂಪರೆಯ ಕಲೆಗಳನ್ನು ಪ್ರದರ್ಶಿಸುವುದು ಒಳಿತು. ಹಾಗೆಯೇ ಕಲೆಗಾಗಿ ಜೀವನವನ್ನೇ ಮುಡಿಪಾಗಿರಿಸಿರುವ ಕಲಾವಿದರನ್ನು ಗೌರವಿಸುವ, ಅಭಿನಂದಿಸುವ ಕಾರ್ಯ ಶ್ಲಾಘನೀಯ.
ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಮೂವರು ಹಿರಿಯ ಕಲಾವಿದರನ್ನು ಸನ್ಮಾನಿಸಿರುವುದು ಸಮಾಜಕ್ಕೆ ಮಾದರಿ ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಹೇಳಿದರು.
ಯಕ್ಷದೇಗುಲದ ಅಧ್ಯಕ್ಷ ಬಾಲಕೃಷ್ಣ ಭಟ್, ಕಲಾಪೋಷಕ ಜನಾರ್ದನ ಹಂದೆ, ಯಶೋದ, ಸೂರ್ಯನಾರಾಯಣ ಹಂದೆ, ಉದ್ಯಮಿ ಉದಯ ಹಂದೆ ಬೆಂಗಳೂರು, ಸನ್ಮಾನಿತರಾದ ಶಿವಾನಂದ ಕೋಟ, ಪರಮೇಶ್ವರ ಭಂಡಾರಿ, ಶಶಿಕಾಂತ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.
ಹಂದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅಮರ ಹಂದೆಯವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವೆಂಕಟರಮಣ ಸೋಮಯಾಜಿ ಸ್ವಾಗತಿಸಿ, ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಐಪೋಕಸ್ ಬೆಂಗಳೂರು ಪ್ರಾಯೋಜಕತ್ವದಲ್ಲಿ, ಕೆ. ಮೋಹನ್ ನಿರ್ದೇಶನದಲ್ಲಿ, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ ಎಚ್, ಚಂದ್ರಕಾ0ತ ಮೂಡುಬೆಳ್ಳೆ, ಲಂಬೋದರ ಹೆಗಡೆ, ಪರಮೇಶ್ವರ ಭಂಡಾರಿ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುದೀಪ ಉರಾಳ, ಸ್ಫೂರ್ತಿ ಭಟ್, ಅಶೋಕ ಆಚಾರ್ಯ, ಅಜಿತ್ ಅಂಬಲಪಾಡಿ, ಆದಿತ್ಯ ಹೆಗಡೆ, ಕೃಷ್ಣಮೂರ್ತಿ ಉರಾಳ, ನವೀನ್ ಕೋಟ, ನರಸಿಂಹ ತುಂಗ, ಸುಹಾಸ ಕರಬ, ರಾಘವೇಂದ್ರ ತುಂಗ, ಮನೋಜ, ಸ್ಕಂದ, ರಾಜು ಪೂಜಾರಿ, ನಾಗರಾಜ ಪೂಜಾರಿ ಇನ್ನಿತರ ಕಲಾವಿದರನ್ನೊಳಗೊಂಡ ಸೈಂಧವ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.
ಕೋಟ ಸುದರ್ಶನ ಉರಾಳ
ಮೊ: 9448547237