ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಉಪ್ಪಿನಂಗಡಿ ಯಕ್ಷ ಸಂಗಮದ ಅಧ್ಯಕ್ಷ ಶ್ರೀ ರವೀಶ್ ಯೆಚ್. ಟಿ ದೀಪ ಬೆಳಗಿಸಿ ಉದ್ಘಾಟಿಸಿ ರಾಮಾಯಣ, ಮಹಾಭಾರತದ ಮೌಲ್ಯಗಳನ್ನು ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಯಕ್ಷ ಸಂಗಮ ಪ್ರಾಯೋಜಿತ ತರಬೇತಿಯನ್ನು ಸಂಸ್ಥೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಶಾಲೆಯ ಉಪಾಧ್ಯಕ್ಷೆ ಶ್ರೀಮತಿ ಅನುರಾಧ ಆರ್ ಶೆಟ್ಟಿ ಮಾತನಾಡಿ ಪುರಾಣ ವಾಚನ, ತಾಳಮದ್ದಳೆ ಮತ್ತು ಯಕ್ಷಗಾನ ಬಯಲಾಟವನ್ನು ವೀಕ್ಷಿಸಿದ ಅನುಭವವು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅನುಸರಿಸಲು ಮತ್ತು ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆತ್ಮಶಕ್ತಿಯನ್ನು ನೀಡುವುದೆಂದು ತಿಳಿಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿದ್ದ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ ಆಚಾರ್ಯ ಆಲಂಕಾರು ಶುಭಹಾರೈಸಿದರು.
ರಾಮ ನಗರ ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷರಾದ ಉಮೇಶ್ ಶೆಣೈ. ಎನ್, ಸಂಜೀವ ಪಾರೆಂಕಿ, ಮೋಹನ್ ಭಟ್, ಲೋಕೇಶ್ ಆಚಾರ್ಯ ಸರಪಾಡಿ, ಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತರಬೇತಿ ಕೇಂದ್ರದ ಗುರುಗಳಾದ ಮಾಣಿ ಸತೀಶ್ ಆಚಾರ್ಯ ಪ್ರಸ್ತಾವನೆಗೈದರು. ಪ್ರದೀಪ್ ಆಚಾರ್ಯ ಸ್ವಾಗತಿಸಿ ಶ್ರೀರಾಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಮಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಜರುಗಿದ “ಶ್ರೀರಾಮ ಕಾರುಣ್ಯ” ತಾಳಮದ್ದಳೆಯಲ್ಲಿ ಭಾಗವತರಾಗಿ ಡಿ.ಕೆ ಆಚಾರ್ಯ ಹಿಮ್ಮೇಳದಲ್ಲಿ ಮೋಹನ ಆಲಂಕಾರು, ಶ್ರೀಪತಿ ಭಟ್ ಇಳಂತಿಲ, ಗುರುಮೂರ್ತಿ ಅಮ್ಮಣ್ಣಾಯ ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ದಿವಾಕರ ಆಚಾರ್ಯ ನೇರಂಕಿ, ಗುಡ್ಡಪ್ಪ ಬಲ್ಯ, ಹರೀಶ್ ಆಚಾರ್ಯ ಬಾರ್ಯ, ಮಾಣಿ ಸತೀಶ್ ಆಚಾರ್ಯ ಭಾಗವಹಿಸಿದ್ದರು.