ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಇವರ ವಾರ್ಷಿಕೋತ್ಸವವು ಮಾ.8 ರಂದು ಜರಗಲಿದೆ.
ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ಶುಭ ಸಂದರ್ಭದಲ್ಲಿ ಗೆಳೆಯರ ಬಳಗ (ರಿ) ಬಲ್ಲಂಗುಡೇಲು ಇವರ ವಾರ್ಷಿಕೋತ್ಸವದ ಅಂಗವಾಗಿ ಮಾ.8 ರಂದು ರಾತ್ರಿ 8 ಗಂಟೆಗೆ ಶ್ರೀ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ದೇವದಾಸ್ ಈಶ್ವರಮಂಗಲ ರಚಿಸಿದ ‘ಮುಗುರು ಮಲ್ಲಿಗೆ’ ಯಕ್ಷಗಾನ ಬಯಲಾಟ ಜರಗಲಿರುವುದು.
ಕಲಾವಿದರ ವಿವರ : ಭಾಗವತರಾಗಿ ಶಿವ ಪ್ರಸಾದ್, ದೀರಜ್ ರೈ ಸಂಪಾಜೆ, ಚಂದ್ರಶೇಖರ ಕಕ್ಕೆಪದವು ಸಂಗೀತಗಾರರಾಗಿ ಸುರೇಶ್ ಕುಮಾರ್ ನಿರ್ಚಾಲ್ ಚೆಂಡೆ ಮದ್ದಲೆಯಲ್ಲಿ ದೇವಿಪ್ರಸಾದ ಕಟೀಲು, ನೇರೊಲ್ ಗಣಪತಿ ನಾಯಕ್, ಆನಂದ ಪಡ್ರೆ ಚಕ್ರತಾಳದಲ್ಲಿ ರಾಮ ಬಿ.ಅರಳ ರಂಜಿಸಲಿದ್ದರೆ.
ಮುಮ್ಮೇಳ ಕಲಾವಿದರಾಗಿ ಸರಪಾಡಿ ಅಶೋಕ್ ಶೆಟ್ಟಿ, ಜಗದೀಶ್ ನಲ್ಕ, ಗುಡ್ಡಪ್ಪ ಸುವರ್ಣ ಪಂಜ, ನಾಗೇಶ ಆಚಾರ್ಯ ಕುಲಶೇಖರ, ಜಗದೀಶ್ ಆಚಾರ್ಯ ಕುಲಶೇಖರ, ಉಮೇಶ್ ಪೂಜಾರಿ ಕೊಲಂಬೆ, ಹರೀಶ್ ಬಂಗಾಡಿ, ವಿಶ್ವನಾಥ ಕಾಯರತಡ್ಕ, ಮನೋಹರ ಬಂಟ್ವಾಳ, ನಿತಿನ್ ಆಚಾರ್ಯ ಪಡುಬಿದ್ರೆ, ಶ್ರೀನಿವಾಸ ಕೊಡಪದವು,
ಧನರಾಜ್ ಸಂಪಾಜೆ, ರಮೇಶ್ ಪೆರಾರ, ನಿತಿನ್ ಪೆರಾರ, ತಾರನಾಥ ಆರ್.ಕೆ ಪದವು, ವಿಘ್ನೇಶ್ ಆಚಾರ್ಯ ಮಾರೂರು, ಸಚಿನ್ ಆರ್.ಕೆ ಪದವು, ಗಿಲ್ಬರ್ಟ್ ಮಂಡೋನ್ಸ ಕಾಟಿಪಳ್ಳ ವಿದೂಷಕರಾಗಿ ರತ್ನಾಕರ ಆಚಾರ್ಯ ಪಡುಬಿದ್ರೆ, ಸುಂದರ ಬಂಗಾಡಿ, ರವಿಕುಮಾರ್ ಸುರತ್ಕಲ್
ಸ್ತ್ರೀ ಪಾತ್ರಗಳಲ್ಲಿ ಸಂತೋಷ್ ಕುಲಶೇಖರ, ಸುಬ್ರಹ್ಮಣ್ಯ ಏರ್ಮಾಳ್, ಸುರೇಶ್ ಕಾರ್ಕಳ, ಪವನ್ ರಾಜ್ ಹೆಗ್ಡೆ ಧರ್ಮಸ್ಥಳರವರು ರಂಗದಲ್ಲಿ ರಂಜಿಸಲಿದ್ದರೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರೆ.