ಭಾರತ ಸೇವಾಶ್ರಮ ಕನ್ಯಾನ (ರಿ.) 58ನೇ ವಾರ್ಷಿಕೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯ ವೇದಿಕೆಯಲ್ಲಿ ಆಶ್ರಮದ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಭಾರತಿ ಕನ್ಯಾಡಿ (ರಿ) ತಂಡದವರಿ0ದ ಸುಧನ್ವ ಮೋಕ್ಷ ತಾಳಮದ್ದಳೆ ಜರುಗಿತು.
ಭಾಗವತರಾಗಿ ಮಹೇಶ್ ಕನ್ಯಾಡಿ ಚೆಂಡೆ ಮದ್ದಳೆ ವಾದಕರಾಗಿ ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು, ಮುರಲೀಧರ ಕಲ್ಲೂರಾಯ ಅರ್ಥದಾರಿಗಳಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ಹರಿದಾಸ ಗಾಂಭೀರ್ ಧರ್ಮಸ್ಥಳ, ದಿವಾಕರ ಆಚಾರ್ಯ ಗೇರುಕಟ್ಟೆ, ಶಶಿಧರ ಕನ್ಯಾಡಿ, ಭವ್ಯ ಹೊಳ್ಳ, ಶ್ರೀರಕ್ಷಾ ಕಳಸ ಮತ್ತು ಯಶೋಧರ ಇಂದ್ರ ಭಾಗವಹಿಸಿದ್ದರು.
ಸೇವಾಶ್ರಮದ ಮುಖ್ಯಸ್ಥರಾದ ಈಶ್ವರ ಭಟ್ ಸ್ವಾಗತಿಸಿ ಎಲ್ಲಾ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ತಾಳಮದ್ದಳೆ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಮತ್ತು ಸಹಕಾರ ನೀಡಿದ ಟ್ರಸ್ಟಿ ಗಿರೀಶ್ ಕುದ್ರೆಂತ್ತಾಯ ಧರ್ಮಸ್ಥಳ ಇವರನ್ನು ಆಶ್ರಮದ ಪರವಾಗಿ ಮುಖ್ಯಸ್ಥರಾದ ಈಶ್ವರ ಭಟ್ ಗೌರವಿಸಿದರು.