೭ನೇ ತರಗತಿ (7th Standard) ಕನ್ನಡ ದ್ವಿತೀಯ ಭಾಷೆ, ಪಾಠ – ೧೨
ಜಾತ್ರೆಯಲ್ಲಿ ಒಂದು ಸುತ್ತು (ಗದ್ಯ)
I. ಪದಗಳ ಅರ್ಥ ತಿಳಿಯಿರಿ :
ಆಕರ್ಷಿಸು – ಸೆಳೆ
ಕಾಯ್ದೆ – ಕಾನೂನು; ಕಟ್ಟಳೆ; ನಿಯಮ.
ಕುಶಲತೆ – ನಿಪುಣತೆ
ಚರ್ಮವಾದ್ಯ -ಚರ್ಮದಿಂದ ಮಾಡಿದ ವಾದ್ಯ.
ಜಾತ್ರೆ – ರಥೋತ್ಸವಕ್ಕೆ ಜನ ಸೇರುವುದು
ನಿರಂತರ – ಸದಾ; ಯಾವಾಗಲೂ.
ನಿರ್ಮಿಸು – ತಯಾರಿಸು
ಬೆಂಡು ಬತ್ತಾಸು – ಒಂದು ಬಗೆಯ ಸಿಹಿತಿಂಡಿ.
ಸನಿಹ – ಹತ್ತಿರ
ಸಮೂಹ – ಗುಂಪು
ಸೊಗಸು – ಚೆಲುವು
ಹರ್ಷೋದ್ಗಾರ – ಸಂತೋಷದ ಧ್ವನಿ
ಟಿಪ್ಪಣಿಗಳು :
೧. ನಂದಿಧ್ವಜ – ಹದಿನಾರರಿಂದ ಹದಿನೆಂಟು ಮೊಳ ಎತ್ತರವಿರುವ ಬಿದುರಿನ ಬೊಂಬಿಗೆ ಹಿತ್ತಾಳೆ
ಬಿರುಡೆಗಳನ್ನು ಜೋಡಿಸಿರುತ್ತಾರೆ. ಏಳೆಂಟು ಅಡಿ ಎತ್ತರದಲ್ಲಿ ಸಣ್ಣ ಆಕೃತಿಯ ನಂದಿ ವಿಗ್ರಹವಿರುತ್ತದೆ. ಕಂಬದ ತುದಿಗೆ ರೇಷ್ಮೆ ಧ್ವಜವನ್ನು ಕಟ್ಟಿರುತ್ತಾರೆ.
೨. ವೀರಗಾಸೆ – ಶೈವ ಸಂಪ್ರದಾಯಕ್ಕೆ ಸೇರಿದ ಒಂದು ಜಾನಪದ ಕಲೆ.
೩. ಯಕ್ಷಗಾನ – ವಿಶಿಷ್ಟವಾದ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಹಾಗೂ ವೇಷಭೂಷಣಗಳನ್ನು
ಒಳಗೊಂಡ ಒಂದು ಶಾಸ್ತಿçÃಯ ಕಲೆ. ಇದು ಉತ್ತರ ಕನ್ನಡ ಮತ್ತು ದಕ್ಷಿಣ
ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
೪. ಬಯಲಾಟ – ಕರ್ನಾಟಕದ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯತೆಗಳಿಂದ ಕೂಡಿದ
ಪ್ರಾಚೀನ ಗಂಡುಕಲೆ. ಇದು ಪೌರಾಣಿಕ ಕಥೆಗಳನ್ನು ಆಧರಿಸಿ ರಾತ್ರಿಯೆಲ್ಲಾ
ಪ್ರದರ್ಶನಗೊಳ್ಳುತ್ತದೆ.
೫. ಕಂಸಾಳೆ – ಮಲೆಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಬಳಸುವ ವಿಶಿಷ್ಟವಾದ
ವಾದ್ಯ.
೬. ಹಾಲಕ್ಕಿ ಕುಣಿತ – ಇದೊಂದು ಸುಗ್ಗಿ ಹಬ್ಬ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
೭. ದೊಂಬರಾಟ – ದೈಹಿಕ ವ್ಯಾಯಾಮದ ಚಮತ್ಕಾರವನ್ನು ಪ್ರದರ್ಶಿಸುವ ಒಂದು
ಜಾನಪದ ಕಲೆ. ಇದನ್ನು ನಡೆಸುವವರು ಬಹುತೇಕ ಅಲೆಮಾರಿಗಳೇ
ಆಗಿರುತ್ತಾರೆ.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಜಾತ್ರೆಯಲ್ಲಿನ ಅಂಗಡಿಗಳನ್ನು ನೋಡಿ ವೇಣು ಏನೆಂದು ಆಶ್ಚರ್ಯ ವ್ಯಕ್ತಪಡಿಸಿದನು?
ಉತ್ತರ:- ಜಾತ್ರೆಯಲ್ಲಿನ ಅಂಗಡಿಗಳನ್ನು ನೋಡಿ ವೇಣು “ಅಬ್ಬಾ ! ಅಜ್ಜಾ, ಇಲ್ಲಿ ಎಷ್ಟೊಂದು ಅಂಗಡಿಗಳಿವೆಯಲ್ಲಾ! ಪ್ರತಿದಿನವೂ ಹೀಗೆ ಇರುತ್ತವೆಯೇ?” ಎಂದು ಆಶ್ಚರ್ಯ ವ್ಯಕ್ತಪಡಿಸಿದನು.
೨. ದೊಂಬರಾಟದ ಹುಡುಗಿ ಯಾವ ಸಾಹಸ ಮಾಡುತ್ತಿದ್ದಳು?
ಉತ್ತರ:- ಉತ್ತರ:- ದೊಂಬರಾಟದ ಹುಡುಗಿ ತಂತಿಯ ಮೇಲೆ ನಡೆಯುತ್ತಾ ಸಾಹಸ ಮಾಡುತ್ತಿದ್ದಳು.
೩. ದೊಂಬರಾಟದ ಹುಡುಗಿಯನ್ನು ಕಂಡ ರಶ್ಮಿಗೆ ಕಾಡಿದ ಪ್ರಶ್ನೆಗಳೇನು?
ಉತ್ತರ:- ದೊಂಬರಾಟದ ಹುಡುಗಿಯನ್ನು ಕಂಡ ರಶ್ಮಿಗೆ “ಈ ರೀತಿ ಚಿಕ್ಕ ಮಕ್ಕಳನ್ನು ದುಡಿಸುವುದು ತಪ್ಪಲ್ಲವೇ? ಅಲ್ದೇ…
ಅವಳೂ ನಮ್ಮಂತೆ ಶಾಲೆಗೆ ಹೋಗಬೇಕಲ್ಲವೇ? ” ಎಂಬ ಪ್ರಶ್ನೆಗಳು ಕಾಡಿತು.
೪. ಅಜ್ಜನು ವೇದಿಕೆ ಮೇಲೆ ಯಾವ ಯಾವ ಕಾರ್ಯಕ್ರಮಗಳು ನಡೆಯುತ್ತವೆಂದು ಹೇಳಿದನು?
ಉತ್ತರ:- ಅಜ್ಜನು ವೇದಿಕೆಯ ಮೇಲೆ ನಾಟಕ, ಯಕ್ಷಗಾನ, ಬಯಲಾಟ, ನೃತ್ಯ
ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದನು.
೫. ಜಾತ್ರೆಯಲ್ಲಿ ತೆರೆದಿಟ್ಟ ಪದಾರ್ಥಗಳನ್ನು ತಿನ್ನಬಾರದು ಏಕೆ?
ಉತ್ತರ:- ತೆರೆದಿಟ್ಟ ತಿಂಡಿಗಳ ಮೇಲೆ ಧೂಳು, ಕ್ರಿಮಿಕೀಟಗಳು ಕುಳಿತಿರುತ್ತವೆ. ಅದನ್ನು ತಿಂದರೆ ವಾಂತಿ ಭೇದಿ ಬರಬಹುದು. ಆದುದರಿಂದ ತೆರೆದಿಟ್ಟ ತಿಂಡಿಗಳನ್ನು ತಿನ್ನಬಾರದು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜಾತ್ರೆಯಲ್ಲಿ ಯಾವ ಯಾವ ಅಂಗಡಿಗಳು ಇದ್ದವು?
ಉತ್ತರ:- ಜಾತ್ರೆ ಮೈದಾನದಲ್ಲಿ ಸಾಲುಸಾಲು ಅಂಗಡಿಗಳು. ಆಟಿಕೆ ಸಾಮಾನುಗಳ, ಬಲೂನುಗಳ, ಗೊಂಬೆಗಳ, ಬಳೆ ಸರಗಳ, ಬೆಂಡು ಬತ್ತಾಸು ಸಿಹಿ ತಿಂಡಿಗಳ ಅಂಗಡಿಗಳು ಒಂದೆಡೆ. ಬಟ್ಟೆ, ಪಾತ್ರೆ, ಹೂ-ಹಣ್ಣುಗಳ ಅಂಗಡಿಗಳ ಸಾಲು ಮತ್ತೊಂದು ಕಡೆ. ಮಗದೊಂದು ಕಡೆ ಹೋಟೆಲುಗಳು, ಜೋಕಾಲಿಗಳು, ತೂಗುತೊಟ್ಟಿಲುಗಳು ಇದ್ದವು.
೨. ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ ಏಕೆ?
ಉತ್ತರ:- ಜಾತ್ರೆಗೆ ಬಹಳಷ್ಟು ಜನ ಬರುತ್ತಾರೆ. ಬಂದವರು ತಮಗೆ ಬೇಕಾದುದನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ದೂರದ ಊರುಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಅಲ್ಲದೆ ಮಾರಾಟಗಾರರಿಗೂ ಒಳ್ಳೆಯ ಅವಕಾಶವಾಗುತ್ತದೆ. ಆದುದರಿಂದ ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ.
೩. ರಥದ ನಿರ್ಮಾಣದ ಬಗ್ಗೆ ಇರ್ಫಾನ್ ಏನೆಂದು ಹೇಳಿದನು?
ಉತ್ತರ:- “ಇಲ್ಲಿಯ ರಥವನ್ನು ನಿರ್ಮಿಸಿದವರು ಯಾರು ಗೊತ್ತಾ? ನಮ್ಮ ತಂದೆ ಕಣೋ! ಜೊತೆಗೆ ಅವರ ಗೆಳೆಯರಾದ ರಮೇಶ್, ಜಾರ್ಜ್, ಮಹಮದ್, ವಿನ್ಸಂಟ್, ಶಂಕರಪ್ಪ ಇತರರೂ ಸೇರಿ ರಥ ನಿರ್ಮಿಸಿದ್ದಾರೆ. ಇದೆಲ್ಲಾ ಒಂದು ದಿನದಲ್ಲಿ ಮಾಡಿದ್ದಲ್ಲ, ಹಲವು ದಿನಗಳಿಂದ ಎಲ್ಲರೂ ಸೇರಿ ಮಾಡಿರುವ ಸಿದ್ಧತೆ” ಎಂದು ರಥದ ನಿರ್ಮಾಣದ ಬಗ್ಗೆ ಇರ್ಫಾನ್ ಹೇಳಿದನು.
೪. ಅಜ್ಜನು ಶಿಕ್ಷಣ ಮತ್ತು ಪ್ರಾಣಿಗಳಿಗೆ ಸಂಬAಧಿಸಿದAತೆ ಮಕ್ಕಳಿಗೆ ಏನೆಂದು ಹೇಳಿದನು?
ಉತ್ತರ:- “ಚಿಕ್ಕ ಮಕ್ಕಳನ್ನು ದುಡಿಸುವುದು ತಪ್ಪು. ಅವರೂ ಎಲ್ಲರಂತೆ ಶಾಲೆಗೆ ಹೋಗಬೇಕು. ಅದಕ್ಕೇ ಮಕ್ಕಳ ಶಿಕ್ಷಣ ಮತ್ತು ಹಕ್ಕಿನ ಕಾಯ್ದೆ ಜಾರಿಗೆ ಬಂದಿರೋದು. ಅಷ್ಟೇ ಅಲ್ಲ ಹಿಂದೆ ಈ ಆಟಗಳಲ್ಲಿ ಪ್ರಾಣಿಗಳನ್ನೂ ಬಳಸುತ್ತಿದ್ದರು. ಈಗ ಪ್ರಾಣಿಗಳನ್ನು ಬಳಸಬಾರದೆಂಬ ಕಾನೂನು ಇದೆ.” ಎಂದು ಅಜ್ಜನು ಶಿಕ್ಷಣ ಮತ್ತು ಪ್ರಾಣಿಗಳಿಗೆ ಸಂಬAಧಿಸಿದAತೆ ಮಕ್ಕಳಿಗೆ ಹೇಳಿದನು.
೫. ರಥದ ಮುಂದೆ ಸಾಗಿದ ಕಲಾ ತಂಡಗಳು ಯಾವುವು?
ಉತ್ತರ:- ರಥದ ಮುಂದೆ ನಂದಿಧ್ವಜ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಹಾಲಕ್ಕಿ ಕುಣಿತ ಮೊದಲಾದ ಕಲಾ ತಂಡಗಳು ಸಾಗುತ್ತಿದ್ದುವು. ಜಾನಪದ ಕಲಾವಿದರು ನರ್ತಿಸುತ್ತಾ ಸಾಗುತ್ತಿದ್ದರು. ಜೊತೆಗೆ ಬ್ಯಾಂಡ್, ಓಲಗ, ತಮಟೆ, ಕಹಳೆವಾದಕರು ಸಾಗುತ್ತಿದ್ದರು. ಚಂಡೆಧ್ವನಿಗೆ ಯಕ್ಷಗಾನ ವೇಷಧಾರಿಗಳು ಕುಣಿಯುತ್ತಾ ಹೋಗುತ್ತಿದ್ದರು.
ಇ) ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ.
೧. “ಜಾತ್ರೆಯಲ್ಲೇಕೆ ಇಷ್ಟೊಂದು ಅಂಗಡಿಗಳು.”
ಉತ್ತರ:- ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ರಶ್ಮಿಯು ತನ್ನ ಅಜ್ಜನಿಗೆ ಹೇಳಿದಳು.
೨. “ರಥದ ಮುಂದೆ ಸಾಗುತ್ತಿರುವ ವಿವಿಧ ವೇಷಧಾರಿಗಳು ಯಾರು?”
ಉತ್ತರ:- ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ವೇಣು ತನ್ನ ಅಜ್ಜನಿಗೆ ಹೇಳಿದನು.
೩. “ಹೌದು, ಅವಳ ಧೈರ್ಯ, ಸಾಹಸವನ್ನು ಮೆಚ್ಚಲೇಬೇಕು.”
ಉತ್ತರ:- ಈ ವಾಕ್ಯವನ್ನು ‘ಜಾತ್ರೆಯಲ್ಲಿ ಒಂದು ಸುತ್ತು’ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ಇರ್ಫಾನನು ವೇಣುವಿಗೆ ಹೇಳಿದನು.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ಆಕರ್ಷಿಸು : ಜಾದೂಗಾರನು ಮಾಯಾಜಾಲ ಮಾಡುತ್ತಾ ಜನರನ್ನು ಆಕರ್ಷಿಸುತ್ತಾನೆ.
೨. ಕುಶಲತೆ : ಕುಂಬಾರನು ತನ್ನ ಕರ ಕುಶಲತೆಯಿಂದ ಮಡಕೆಯನ್ನು ತಯಾರಿಸುತ್ತಾನೆ.
೩. ಸೊಗಸು : ಜೋಗ ಜಲಪಾತದ ರಮಣೀಯ ದೃಶ್ಯವು ನೋಡಲು ಬಲು ಸೊಗಸು.
೪. ವೀಕ್ಷಿಸು : ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ದೂರದೂರದ ಊರುಗಳಿಂದ ಜನರು ಬರುತ್ತಾರೆ.
೫. ಕುತೂಹಲ : ಸಣ್ಣ ಮಕ್ಕಳು ಪ್ರಾಣಿ ಪಕ್ಷಿಗಳನ್ನು ಕುತೂಹಲದಿಂದ ನೋಡುತ್ತಾರೆ.
ಆ) ಲಿಂಗ ಸಂಬAಧಿ ‘ಅ’ ಪಟ್ಟಿಯಲ್ಲಿರುವ ಅಂಶಗಳಿಗೆ ‘ಬ’ ಪಟ್ಟಿಯ ಅಂಶಗಳನ್ನು
ಹೊAದಿಸಿ ಬರೆಯಿರಿ.
‘ಅ’ ಪಟ್ಟಿ ‘ಬ’ ಪಟ್ಟಿ
೧) ಅಜ್ಜಿ ————————- ಅ) ಅಜ್ಜ
೨) ತಾಯಿ ————————ಆ) ತಂದೆ
೩) ಹುಡುಗಿ ———————–ಇ) ಹುಡುಗ
೪) ಬಾಲಕಿ ———————–ಈ) ಬಾಲಕ
೫) ಗಂಡಸು ———————-ಉ) ಹೆಂಗಸು
೬) ಅತ್ತೆ ————————-ಊ) ಮಾವ
೭) ಅಣ್ಣ ————————-ಋ) ಅಕ್ಕ
ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಅನುಕೂಲ X ಅನಾನುಕೂಲ
೨. ಸಂತೋಷ X ಅಸಂತೋಷ, ದುಃಖ
೩. ಧೈರ್ಯ X ಅಧೈರ್ಯ, ಹೆದರಿಕೆ
೪. ಆಧಾರ X ನಿರಾಧಾರ
೫. ಸಮತೋಲನ X ಅಸಮತೋಲನ
೬. ಸನಿಹ X ದೂರ
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ಓಡಾಟ = ಓಡು + ಆಟ
೨. ಬಯಲಾಟ = ಬಯಲು + ಆಟ
೩. ಹರ್ಷೋದ್ಗಾರ = ಹರ್ಷ + ಉದ್ಘಾರ
೪. ದೊಂಬರಾಟ = ದೊಂಬರ + ಆಟ
