ಕಳೆದ ವರುಷ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳಾದ ರಾಜರ್ಷಿ ಪದ್ಮವಿಭೂಷಣ ಡಾ| ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಂಡ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾಮದ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ವಿಭಿನ್ನ ರೀತಿಯಲ್ಲಿ ಸಂಪನ್ನಗೊಂಡಿದೆ. ಕಲೆ ಸಾಹಿತ್ಯ ಬೆಳೆಸುವ ಉಳಿಸುವ ಮುಂದಿನ ಪೀಳಿಗೆ ಹಸ್ತಾಂತರಿಸುವ ದೃಢಸಂಕಲ್ಪದ ಯೋಜನೆಯು ಪ್ರತಿಷ್ಠಾನ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಯಶಸ್ವಿಯಾಗುತ್ತಿದೆ.
ಇಂತಹ ಕಾರ್ಯಕ್ರಮಗಳು ನಡೆದಲ್ಲಿ ಮಾತ್ರವೇ ಕಲೆಯ ಬೆಳವಣಿಗೆ ಕಾಣಬಹುದು. ಒಂದು ಅಕಾಡೆಮಿ- ಸರಕಾರ ಮಾಡಬೇಕಾದ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿದೆ. ಪ್ರತಿಷ್ಠಾನದ ಯೋಜನೆಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿ ಇಂತಹ ಹತ್ತು ಹಲವು ಚಟುವಟಿಕೆಗಳ ನಡೆಯಲಿ ಎಂದು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇವರು ಆಶೀರ್ವವಚನ ಮೂಲಕ ತಿಳಿಸಿದರು.
![](https://yakshadeepa.com/wp-content/uploads/2024/12/IMG-20241227-WA0089.jpg)
![](https://yakshadeepa.com/wp-content/uploads/2024/12/IMG-20241227-WA0091.jpg)
![](https://yakshadeepa.com/wp-content/uploads/2024/12/IMG-20241227-WA0093.jpg)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶೇಖರ ಗೌಡ ಪಾಟೀಲ ಗೌರವಾಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ,ಚಿಕ್ಕಕಬ್ಬಾರ ಕರ್ನಾಟಕ ಇವರು ವಹಿಸಿದರು. ಎತ್ತಣ ಉತ್ತರ ಕರ್ನಾಟಕ ಎತ್ತಣ ಕಾಸರಗೋಡು? ಕಲೆ ಸಾಹಿತ್ಯ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ ಕಾಸರಗೋಡು ಪ್ರದೇಶ. ಈ ಪ್ರದೇಶದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಸಿರಿಬಾಗಿಲು ಪ್ರತಿಷ್ಠಾನ. ಇಂತಹ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯಿಂದ ಆಗಮಿಸಿ ಈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸುವುದು ನಮ್ಮ ಯೋಗ ಭಾಗ್ಯವೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಪ್ರತಿಷ್ಠಾನದ ಚಟುವಟಿಕೆಗಳಿಗೆ ಮುಂದೆಯೂ ಉತ್ತರ ಕರ್ನಾಟಕದವರಾದ ನಮ್ಮ ,ಹಾಗು ನಿಮ್ಮ ಈ ಬಾಂಧವ್ಯ ಮುಂದುವರಿಯಲಿ. ಕಲೆ ಸಂಸ್ಕೃತಿ, ಸಾಹಿತ್ಯ ಉಳಿಯಲಿ ,ಬೆಳೆಯಲಿ ಎಂದು ತಿಳಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀ ಕೊಕ್ಕಡ ವೆಂಕಟರಮಣ ಭಟ್ ಬಹುಭಾಷಾ ವಿದ್ವಾಂಸರು ವಿಶ್ರಾಂತ ಶಿಕ್ಷಕರು ಮಂಡ್ಯ, ಡಾ. ಪ್ರಭುಸ್ವಾಮಿ ಹಾಲೆವಾಡಿಮಠ ,ಡಾ.ಎಸ್.ಹನುಮಂತಪ್ಪ ಹಾವೇರಿ ,ಶ್ರೀಧರ ಶೆಟ್ಟಿ ಮುಟ್ಟಂ ,ಶ್ರೀ ಗೋಪಾಲ ಶೆಟ್ಟಿ ಅರಿಬೈಲು ,ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ ,ಶ್ರೀಮತಿ ಗೋಪಿಕಾ ಸತೀಶ ಮಯ್ಯ, ಶ್ರೀ ನರಸಿಂಹಮೂರ್ತಿ ಟಿ., ಡಾ. ಗಂಗಯ್ಯ ಕುಲಕರಣಿ ,ಶ್ರೀ ಮುಕೇಶ್ ಯೋಜನಾಧಿಕಾರಿ ಧರ್ಮಸ್ಥಳ ಶುಭ ಹಾರೈಸಿದರು.
ಶ್ರೀ ಕೃಷ್ಣ ಕಾರಂತ ಬನ್ನೂರು, ಎಸ್. ಎನ್. ರಾಮ ಶೆಟ್ಟಿ, ಸೀನ ಶೆಟ್ಟಿ ಕಜೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಬಹುಭಾಷಾ ವಿದ್ವಾಂಸರಾದ, ಪ್ರತಿಷ್ಠಾನ ಪ್ರಕಾಶಿಸಿದ ಸರಿ ಕನ್ನಡ ಸರಿಗನ್ನಡ ಪುಸ್ತಕದ ಸಂಪಾದಕರಾದ ಶ್ರೀ ಕೊಕ್ಕಡ ವೆಂಕಟರಮಣ ಭಟ್ ಇವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಧುರ ಉಪಾಧ್ಯ ಬೆಂಗಳೂರು ಇವರಿಗೆ ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕರು ಗೌರವ ನೀಡಲಾಯಿತು.
ಹೊರ ರಾಜ್ಯದ ಕನ್ನಡಿಗರಾಗಿ, ಗುಜರಾತ್ ವಾಪಿಯಲ್ಲಿರುವ ಶಂಕರನಾರಾಯಣ ಕಾರಂತ ಪಣಂಬೂರು ಇವರನ್ನು ಗೌರವಿಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ನಾಟ್ಯ ತರಗತಿಯ ಶಿಕ್ಷಕರಾದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಅವರನ್ನು ಪ್ರತಿಷ್ಠಾನ ವತಿಯಿಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಸೇರಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಮಯ್ಯ ದಂಪತಿಗಳನ್ನು ನಾಟ್ಯ ತರಗತಿಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಸೇರಿ ಗೌರವಿಸಿದರು.
ಇದಕ್ಕೂ ಮೊದಲು ವಾರ್ಷಿಕೋತ್ಸವ ಪ್ರಯುಕ್ತ ಊರಿನ ತಂಡಗಳ ಭಜನಾ ಕಾರ್ಯಕ್ರಮ, ಪ್ರತಿಷ್ಠಾನದ ಮುಂದಿನ ಪೀಳಿಗೆಗೆ ಹಸ್ತಾಂತರ ಯೋಜನೆಯಡಿ ಮಕ್ಕಳ ತಂಡದ ತಾಳಮದ್ದಲೆ ಕಾರ್ಯಕ್ರಮ, ಪ್ರತಿಷ್ಠಾನದಲ್ಲಿ ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳ ರಂಗ ಪ್ರವೇಶ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ತಂಡದಿಂದ ಗರುಡ ಗರ್ವಭಂಗ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಪ್ರತಿಷ್ಠಾನದ ಕಾರ್ಯ ಯೋಜನೆಯನ್ನು ತಿಳಿಸಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಚಂದ್ರಕಲಾ ನೀರಾಳ ಇವರು ನಿರೂಪಿಸಿದರೆ, ಕುಮಾರಿ ವಿದ್ಯಾಶ್ರೀ ನೀರಾಳ ಇವರು ಧನ್ಯವಾದಗಳು. ಸಿರಿಬಾಗಿಲು ಗ್ರಾಮಸ್ಥರು ಪ್ರತಿಷ್ಠಾನದ ವಿದ್ಯಾರ್ಥಿಗಳ ಪೋಷಕರು ಊರ ಪರ ಊರ ಗಣ್ಯಾತಿ ಗಣ್ಯರು ಆಗಮಿಸಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು.