ಕಳೆದ ವರುಷ ಡಿಸೆಂಬರ್ 26ರಂದು ಪರಮಪೂಜ್ಯ ರಾಜರ್ಷಿ ಡಾ|ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಲ್ಲಿ ಲೋಕಾರ್ಪಣೆಗೊಂಡ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ಪ್ರಥಮ ವಾರ್ಷಿಕೋತ್ಸವವನ್ನು ಇದೇ ತಿಂಗಳ 26 ರಂದು ಗುರುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಆಚರಿಸಲಿದೆ.
26 ರಂದು ಬೆಳಗ್ಗೆ 7ರಿಂದ ಭಜನೆ ಕಾರ್ಯಕ್ರಮ,,10 ಗಂಟೆಯಿಂದ ಪ್ರತಿಷ್ಠಾನದ ಯಕ್ಷಗಾನ”” ಯಕ್ಷಗಾನ ಮುಂದಿನ ಪೀಳಿಗೆಗೆ ಹಸ್ತಾಂತರ”” ಯೋಜನೆಯಂತೆ ಮಕ್ಕಳ ತಂಡದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಮಧ್ಯಾಹ್ನ 2 ಗಂಟೆಯಿಂದ ಪ್ರತಿಷ್ಠಾನದ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ- ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರತಿಷ್ಠಾನದ ಯಕ್ಷಗಾನ ಗುರುಗಳಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಇವರು ನಿರ್ದೇಶಿಸಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ನಡೆಯುವ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀಮದ್ ಎಡನೀರು ಮಠ ಇವರು ಆಶೀರ್ವಚನ ನೀಡಲಿದ್ದಾರೆ.
ಸಭಾಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಚಿಕ್ಕ ಕಬ್ಬಾರ ಹಾವೇರಿ ಜಿಲ್ಲೆ ಇದರ ಗೌರವಾಧ್ಯಕ್ಷರಾದ ಶ್ರೀ ಶೇಖರ ಗೌಡ ಪಾಟೀಲ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಎನ್ .ಎ .ನಲ್ಲಿಕುನ್ನು, ಬಹುಭಾಷಾ ವಿದ್ವಾಂಸರಾದ ಮಂಡ್ಯದ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್, ಡಾ. ಪ್ರಭು ಸ್ವಾಮಿ ಹಾಳೇವಾಡಿ ಮಠ, ಡಾ. ಎಸ್ ಹನುಮಂತಪ್ಪ ಹಾವೇರಿ, ಶ್ರೀ ಶ್ರೀಧರ ಶೆಟ್ಟಿ ಮುಟ್ಟಂ, ಶ್ರೀ ಗೋಪಾಲ ಶೆಟ್ಟಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಶ್ರೀಮತಿ ಗೋಪಿಕಾ ಸತೀಶ ಮಯ್ಯ,,ಶ್ರೀ ನರಸಿಂಹಮೂರ್ತಿ, ಡಾ. ಗಂಗಯ್ಯ ಕುಲಕರ್ಣಿ ,ಶ್ರೀ ಮುಖೇಶ್ ಯೋಜನಾಧಿಕಾರಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂತಾದವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ಮಧುರ ಉಪಾಧ್ಯ ಬೆಂಗಳೂರು, ಶ್ರೀ ಪಣಂಬೂರು ಶಂಕರನಾರಾಯಣ ಕಾರಂತ, ಶ್ರೀ ಲಕ್ಷ್ಮಣ ಕುಮಾರ್ ಮರಕಡ ಇವರನ್ನು ಪ್ರತಿಷ್ಠಾನವತಿಯಿಂದ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಾನದ ಯಕ್ಷಗಾನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.