ಯಕ್ಷಗಾನ ಕಲಾರಂಗದ, ಯಕ್ಷನಿಧಿಯ ವೃತ್ತಿ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ 50% ರಿಯಾಯತಿಯ ಬಸ್‌ಪಾಸ್ ಸೌಲಭ್ಯದ ವಿತರಣೆ ಇಂದು (13.12.2024) ಐವೈಸಿ ಸಭಾಭವನದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಸಂಸ್ಥೆಯ ಉಪಾಧ್ಯಕ್ಷರೂ, ಬಹುಮೇಳಗಳ ಯಜಮಾನರೂ ಆದ ಪಿ. ಕಿಶನ್ ಹೆಗ್ಡೆ, ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿಯವರು

ಧರ್ಮಸ್ಥಳ, ಮಂದಾರ್ತಿ ಮೇಳಗಳ ಕಲಾವಿದರುಗಳಾದ ಧರ್ಮಸ್ಥಳ ಚಂದ್ರಶೇಖರ, ಬಿ. ಮಹಾಬಲ ನಾಯ್ಕ್ ಹಾಗೂ ಆನಂದ ಕನ್ನಾರು ಇವರಿಗೆ ಸಾಂಕೇತಿಕವಾಗಿ ವಿತರಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಬಸ್‌ಮಾಲಕರ ಸಂಘದ ಸಹಕಾರವನ್ನು ಸ್ಮರಿಸಿಕೊಂಡು, ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ಎಂ. ಹೆಗಡೆ, ವಿಜಯಕುಮಾರ್ ಮುದ್ರಾಡಿ, ಗಣೇಶ್ ಬ್ರಹ್ಮಾವರ ಹಾಗೂ ಕಿಶೋರ್ ಸಿ. ಉದ್ಯಾವರ ಉಪಸ್ಥಿತರಿದ್ದರು.
30 ಮೇಳಗಳ ಸುಮಾರು 600 ಕಲಾವಿದರು ಇದರ ಫಲಾನುಭವಿಗಳಾಗಿದ್ದಾರೆ.