ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ
ದಶಂಬರ್ 6ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಕುಮಾರಿ ವೈಷ್ಣವಿ ಪೈ ( ಶ್ರೀ ನಾಗೇಶ ಪೈ ಹಾಗೂ ಶ್ರೀಮತಿ ಸಹನಾ ಪೈ ದಂಪತಿಗಳ ಪುತ್ರಿ) ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹಾಗೆಯೇ 9ನೇ ತರಗತಿಯ ಕುಮಾರಿ ನಿಲಿಷ್ಕಾ ( ಶ್ರೀ ದಿನೇಶ್ ನಾಯ್ಕ್ ಮತ್ತು ಶ್ರೀಮತಿ ಸ್ಮಿತಾಶ್ರೀ ದಂಪತಿಗಳ ಪುತ್ರಿ) ಚಿತ್ರಕಲೆಯಲ್ಲಿ ದ್ವಿತೀಯ ಬಹುಮಾನ
ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ಕುಮಾರಿ ರಚನಾ ಬಾಯಾರ್ ( ಶ್ರೀ ರಂಜನ್ ಕುಮಾರ್ ಬಾಯಾರ್ ಮತ್ತು ಶ್ರೀಮತಿ ಸುಪ್ರಿಯಾ ದಂಪತಿಗಳ ಪುತ್ರಿ) ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ.
ಈ ವಿಚಾರವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.