Thursday, December 12, 2024
Homeಸುದ್ದಿತನ್ನನ್ನು ಮರೆತು ಮತ್ತೆ ಗಂಡನ ಜೊತೆಗೆ ತೆರಳಿದ್ದಕ್ಕಾಗಿ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ - ಇನ್ಸ್ಟಾಗ್ರಾಮ್...

ತನ್ನನ್ನು ಮರೆತು ಮತ್ತೆ ಗಂಡನ ಜೊತೆಗೆ ತೆರಳಿದ್ದಕ್ಕಾಗಿ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ – ಇನ್ಸ್ಟಾಗ್ರಾಮ್ ಪ್ರೀತಿಗೆ ಬಲಿಯಾದ ಮಹಿಳೆ

ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಗೃಹಿಣಿಯೊಬ್ಬಳ ಬರ್ಬರ ಹತ್ಯೆಯಾದ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ತನ್ನ ಪ್ರೇಯಸಿ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಗ್ರಾಮದಲ್ಲಿ ನಡೆದಿದೆ.

 ಒಮ್ಮೆ ತನ್ನನ್ನು ಪ್ರೀತಿಸಿ ತನ್ನ ಜೊತೆಗೆ ಕಾಲ ಕಳೆದು ಆಮೇಲೆ ತನ್ನ ಬಿಟ್ಟು ಗಂಡನ ಜತೆ ತೆರಳಿದ್ದಕ್ಕೆ ಕೋಪಗೊಂಡು ಆಕೆಯ ಮಕ್ಕಳ ಎದುರಲ್ಲೇ ಮಹಿಳೆಯನ್ನು ಹತ್ಯೆಗೈದಿರುವಂತಹ ಘಟನೆ ಜಿಲ್ಲೆಯ ಎನ್​.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಇರಿದು ತೃಪ್ತಿ(25)ಯನ್ನು ಹತ್ಯೆಗೈದ ಪ್ರಿಯಕರ ಚಿರಂಜೀವಿ, ಬಳಿಕ ಕರೆಯ ಹೊಂಡಕ್ಕೆ ಶವವನ್ನು ಎಳೆದುಕೊಂಡು ಹೋಗಿ ಎಸೆದು ಪರಾರಿ ಆಗಿದ್ದಾನೆ.

ಕಿಚ್ಚಬ್ಬಿ ಗ್ರಾಮದ ಮಹಿಳೆ ತೃಪ್ತಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾದ ಮೇಲೆ ಪ್ರೀತಿಸುತ್ತಿದ್ದರು.

ನಂತರ ಹಿಂದೆ ಚಿರಂಜೀವಿ ಜೊತೆ ತೃಪ್ತಿ ತೆರಳಿದ್ದಳು ಎಂದು ಹೇಳಲಾಗುತ್ತಿದೆ. ಆಗ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ಪೊಲೀಸ್ ಕ್ರಮದ ನಂತರ ವಾಪಸ್ ಬಂದಿದ್ದಳು. ಬಂದ ಬಳಿಕ ಮನೆಯವರ ರಾಜಿ ಮಧ್ಯಸ್ಥಿಕೆಯಲ್ಲಿ, ಆತನ ಜೊತೆ ಮಾತು ಹಾಗೂ ಸ್ನೇಹವನ್ನು ಬಿಟ್ಟಿದ್ದಳು ಎಂದು ತಿಳಿದುಬಂದಿದೆ.

ತನ್ನ ಸಂಪರ್ಕ ಬಿಟ್ಟು ಬಿಟ್ಟ ಕಾರಣದಿಂದ ಚಿರಂಜೀವಿ ಕೋಪಗೊಂಡಿದ್ದ. ತೃಪ್ತಿಯ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದು ಶನಿವಾರ ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಇರಿದು ದಾರುಣವಾಗಿ ಕೊಲೆ ಮಾಡಿದ ಬಳಿಕ ಮನೆಯಿಂದ ಶವವನ್ನು ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಎಸೆದ.

ತೃಪ್ತಿ ಮತ್ತು ಚಿರಂಜೀವಿ ಇನ್ಸ್ಟಾಗ್ರಾಮ್​ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಗಂಡ ಹಾಗೂ ಎರಡು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದಳು.

ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಗ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಕರೆತಂದ ನಂತರ ಪತಿ ಪತ್ನಿ ಇಬ್ಬರೂ ಮನೆಯವರ ರಾಜಿ ಮಧ್ಯಸ್ಥಿಕೆಯಲ್ಲಿ ಮೊದಲಿನಂತೆ ಜೀವನ ನಡೆಸುತ್ತಿದ್ದರು.

ಆದರೆ ಈ ಬಗ್ಗೆ ಕೋಪಗೊಂಡ ಆಕೆಯ ಪ್ರಿಯಕರ ಚಿರಂಜೀವಿ ಆಕೆಯ ಗಂಡ ಇಲ್ಲದಿರುವ ಸಮಯ ನೋಡಿ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಆ ಬಳಿಕ ಅರ್ಧ ಕಿ.ಮೀ. ದೂರದ ವರೆಗೆ ಕಾಫಿ ತೋಟದ ನಡುವೆ ಆಕೆಯ ಶವವನ್ನು ಎಳೆದು ತಂದು 40 ಅಡಿ ಆಳವಿರುವ ಕೆರೆಯಲ್ಲಿ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.‌

ಕಾಫಿ ನಾಡನ್ನು ದಿಗ್ಭ್ರಮೆಗೊಳಿಸಿದ ಈ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ಚಿಕ್ಕಮಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಚಿರಂಜೀವಿಯನ್ನು ಬಂಧಿಸಿ ಕೇಸ್ ದಾಖಲಿಸಿದ್ದಾರೆ.

ಪ್ರಕರಣ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments