Saturday, January 18, 2025
Homeಸುದ್ದಿಹವ್ಯಾಸಿ ಯಕ್ಷಗಾನ ತಂಡಗಳ ಬಹುದೊಡ್ಡ ಸಮಾಗಮ

ಹವ್ಯಾಸಿ ಯಕ್ಷಗಾನ ತಂಡಗಳ ಬಹುದೊಡ್ಡ ಸಮಾಗಮ

ಬೆಂಗಳೂರಿನ ಯಕ್ಷಪ್ರಿಯರಿಗೆ ಸಿಹಿ ಸುದ್ಧಿ ಒಂದಿದೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ವೃತ್ತಿರಂಗಭೂಮಿಯ ಯಕ್ಷಗಾನ ಕಲಾವಿದರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಹಸಗಳು ನಡೆದಿತ್ತು.

ಆದರೆ ಇಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುವ ಹವ್ಯಾಸಿ ರಂಗಭೂಮಿಯ ಕಲಾವಿದರುಗಳನ್ನು ಅವರ ತಂಡಗಳನ್ನು ಒಂದೇ ವೇದಿಕೆಯಲ್ಲಿ ಕಾಣಿಸುವ ಪ್ರಯತ್ನಗಳು ಅಷ್ಟಾಗಿ ನಡೆಯಲಿಲ್ಲ ಎನ್ನಬಹುದು.

ಈ ನಿಟ್ಟಿನಲ್ಲಿ ಟೀಮ್ ತಿತೈತೈ ತಂಡವು ನೂತನ ಪ್ರಯತ್ನವೆಂಬಂತೆ 80 ಕ್ಕೂ ಹೆಚ್ಚು ಬೆಂಗಳೂರಿನ ಹವ್ಯಾಸಿ ಕಲಾವಿದರುಗಳನ್ನು, 20ಕ್ಕೂ ಹೆಚ್ಚು ತಂಡಗಳನ್ನು, 25ಕ್ಕೂ ಅಧಿಕ ಯಕ್ಷಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಬೆಂಗಳೂರಿನ ಯಕ್ಷ ತಂಡಗಳ ಸ್ನೇಹ ಕೂ(ಡಾ)ಟ ಎಂಬ ಹೆಸರಿನಲ್ಲಿ ಇದೇ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ರಾತ್ರಿಯ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದು ಬೆಂಗಳೂರಿನ ಮಟ್ಟಿಗೆ ಹೊಸ ಹೆಜ್ಜೆ. ಇಲ್ಲಿ ಪೂರ್ವರಂಗ(ತೆಂಕು) ಧರ್ಮಾಂಗಧ ದಿಗ್ವಿಜಯ, ಸೇತು ಬಂಧನ, ಕರ್ಣಾರ್ಜುನ ಕಾಳಗ, ದಕ್ಷಯಜ್ಞ, ಭಕ್ತ ಸುಧನ್ವ ಮತ್ತು ಮೀನಾಕ್ಷಿ ಕಲ್ಯಾಣ ಎಂಬ ಒಟ್ಟು ಆರು ಪೌರಾಣಿಕ ಆಖ್ಯಾನಗಳನ್ನು ಕಲಾವಿದರುಗಳು ಪ್ರಸ್ತುತಗೊಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಲಾವಿದರಾಗಿ ಪ್ರಿಯಾಂಕ ಮೋಹನ್, ನಿಹಾರಿಕ ಭಟ್, ರವೀಶ್ ಹೆಗಡೆ, ಎ.ಪಿ ಫಾಟಕ್, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಶಶಿರಾಜ ಸೋಮಯಾಜಿ, ಅಂಬರೀಷ್ ಭಟ್, ರವಿ ಮಡೋಡಿ, ನವೀನ್ ಶೆಟ್ಟಿ, ಪ್ರಶಾಂತ್ ವರ್ಧನ, ನಾಗಶ್ರೀ ಗೀಜಗಾರ್ ಮುಂತಾದವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಯಕ್ಷ ಗುರುಗಳಾದ ಶಿವಕುಮಾರ್ ಬೇಗಾರ್ , ಕೃಷ್ಣಮೂರ್ತಿ ತುಂಗ , ರಾಧಾಕೃಷ್ಣ ಉರಾಳ, ಶಂಕರ್ ಬಾಳ್ಕುದ್ರು, ಸುಬ್ರಾಯ ಹೆಬ್ಬಾರ್, ಪ್ರಸನ್ನ ಮಾಗೋಡು, ಪ್ರಸಾದ್ ಚೇರ್ಕಾಡಿ, ಮನೋಜ್ ಭಟ್ , ಅರ್ಪಿತಾ ಹೆಗಡೆ, ಅಶ್ವಿನಿ ಕೊಂಡದಕುಳಿ, ಶ್ರೀನಿಧಿ ಹೊಳ್ಳ ಸೇರಿದಂತೆ ಮುಂತಾದವರನ್ನು ಗೌರವಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ 6362673283 ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments