ಕಾರಿಗೆ ಕಾರು ಢಿಕ್ಕಿಯಾಗಿ ಆಮೇಲೆ ಮರಕ್ಕೆ ಗುದ್ದಿ ನುಜ್ಜುಗುಜ್ಜಾದ ಘಟನೆಯಲ್ಲಿ ತಂದೆ, ಮಗ ದಾರುಣಬಾಗಿ ಮೃತ್ಯುವಶರಾಗಿದ್ದಾರೆ. ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಮೃತರಾದವರನ್ನು ತಂದೆ ರಾಕೇಶ್ (28), ಮಗ ಮೋಕ್ಷಿತ್‍ಗೌಡ (8) ಎಂದು ಗುರುತಿಸಲಾಗಿದೆ. ಈ ಭೀಕರ ಘಟನೆಯಲ್ಲಿ ರಾಕೇಶ್‍ನ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಆಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನದಲ್ಲಿ ಕಾರು ಬ್ರೇಕ್ ಫೇಲ್ ಆಗಿ ಮೊದಲು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ.ಕಾರಿಗೆ ಡಿಕ್ಕಿಯಾದ ಬಳಿಕ ಮರಕ್ಕೆ ಗುದ್ದಿ ಅಪ್ಪಚ್ಚಿಯಾದದ್ದರ ಪರಿಣಾಮ ತಂದೆ ಹಾಗೂ ಮಗ ನಿಧನರಾದ ದಾರುಣ ಘಟನೆ ಚನ್ನರಾಯಪಟ್ಟಣದ ಅಮಾನಿಕೆರೆ ಸಮೀಪ ನಡೆದಿದೆ.
ಕಾರು ಮರಕ್ಕೆ ಡಿಕ್ಕಿಯಾಗುವ ಮೊದಲೇ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ ಬಳಿಕ ಮರಕ್ಕೆ ಡಿಕ್ಕಿಯಾಗಿ ಮುದ್ದೆಯಾಗಿದೆ. ಇದರಿಂದಾಗಿ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ.
ಕುಟುಂಬ ಸದಸ್ಯರು ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಶ್ರವಣೇರಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.