ಕಿರುತೆರೆ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಚ್ಚಿಬೌಲಿ ಸಿಬ್ಲಾಕ್, ಶ್ರೀರಾಮ್ ನಗರ ಕಲನಿಯಲ್ಲಿರುವ ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸೇರಿದ ಸೋಭಿತಾ ಕನ್ನಡ ಹಾಗೂ ತೆಲುಗಿನಲ್ಲಿ ಹಲವು ಧಾರಾವಾಹಿಗಳನ್ನು ಮಾಡಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಸೋಭಿತಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಗಚ್ಚಿಬೌಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರಹ್ಮಗಂಟು, ನಿಂತೇಳೆ ಧಾರಾವಾಹಿಗಳ ಮೂಲಕ ಜನಮನ್ನಣೆ ಗಳಿಸಿದ್ದ ಸೋಭಿತಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಕೆಯ ಆತ್ಮಹತ್ಯೆಗೆ ಕಾರಣಗಳು ತಿಳಿದುಬರಬೇಕಿದೆ.
ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಉತ್ತಮ ಹೆಸರು ಗಳಿಸಿರುವ ಸೋಭಿತಾ ಪತಿ ಸುಧೀರ್ ಜೊತೆ ಶ್ರೀರಾಮನಗರ ಕಾಲೋನಿಯಲ್ಲಿ ವಾಸವಾಗಿದ್ದರು. ಮದುವೆ ನಂತರ ಶೋಭಿತಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು.
ಧಾರಾವಾಹಿಗಳ ಹೊರತಾಗಿ, ಅವರು ಫಸ್ಟ್ ಡೇ ಫಸ್ಟ್ ಶೋ ಎಂಬ ತೆಲುಗು ಚಲನಚಿತ್ರದಲ್ಲಿ ನಟಿಸಿದ್ದಾರೆ. ಶೋಭಿತಾ ಆತ್ಮಹತ್ಯೆಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು.
- ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಗುಂಡಿನ ದಾಳಿ – ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ
- ಪತ್ನಿ ಹತ್ಯೆ ಪ್ರಕರಣ, ಯುಎಸ್ಎ ಯಲ್ಲಿ ಪತಿ ನರೇಶ್ ಭಟ್ ಬಂಧನ – ಗಂಡ ಯಾವಾಗ ಮರುವಿವಾಹ ಆಗಬಹುದು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದ ಆರೋಪಿ
- ವಿಟ್ಲದ ರಿಕ್ಷಾ ಚಾಲಕ ನಾಪತ್ತೆ – ಉಪ್ಪಿನಂಗಡಿಯಲ್ಲಿ ನಿಂತುಕೊಂಡಿರುವ ಖಾಲಿ ರಿಕ್ಷಾ
- ಯಕ್ಷಗಾನದ ಹಿರಿಯ ಭಾಗವತ ನಿಧನ
- ಹವ್ಯಾಸಿ ಯಕ್ಷಗಾನ ತಂಡಗಳ ಬಹುದೊಡ್ಡ ಸಮಾಗಮ