ಕಾಸರಗೋಡು ಸಮೀಪದ ಕುಂಬಳೆಯಲ್ಲಿ ಯುವಕನೊಬ್ಬ ಯುವತಿಯರನ್ನು ಸ್ಪರ್ಶಿಸುವ ಉದ್ದೇಶದಿಂದ ಅವರ ಜೊತೆ ಇರಲು ಬುರ್ಕಾ ಧರಿಸಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಸಾರ್ವಜನಿಕರು ಅವನನ್ನು ಹಿಡಿದು ಹೊಡೆತದ ಸ್ಪರ್ಶ ನೀಡಿದ್ದಾರೆ.
ಈ ಘಟನೆ ಕಾಸರಗೋಡು ಜಿಲ್ಲೆಯ ಮಂಗಳೂರು – ಕಾಸರಗೋಡು ಹೆದ್ದಾರಿಯ ಕುಂಬಳೆ ಎಂಬಲ್ಲಿ ನಡೆದಿದೆ. ಈ ಯುವಕ ಬಸ್ಸಿನಲ್ಲಿ ಬುರ್ಕಾ ಹಾಕಿಕೊಂಡು ಯುವತಿಯರ ನಡುವೆ ಬಂದು ಕುಳಿತಿದ್ದ.
ಬಸ್ಸಿನಲ್ಲಿ ಕುಳಿತಿದ್ದ ಕಾಲೇಜು ಯುವತಿಯರ ನಡುವೆ ಈತ ಮುಸ್ಲಿಂ ಯುವತಿಯರಂತೆ ಬುರ್ಕಾ ಧರಿಸಿ ಪ್ರಯಾಣಿಸುತ್ತಿದ್ದ ಎಂದು ಹೇಳಲಾಗುತ್ತದೆ. ಗಾಳಿ ಬೀಸುತ್ತಿದ್ದುದರಿಂದ ಮುಖದ ಬಟ್ಟೆ ಹಾರಿದಾಗ ಬುರ್ಕಾ ಧರಿಸಿರೋದು ಹುಡುಗಿಯಲ್ಲ, ಅದು ಯುವಕ ಎಂದು ಪಕ್ಕದಲ್ಲಿದ್ದ ಯುವತಿಯರಿಗೆ ಗೊತ್ತಾಗಿದೆ.
ಬಳಿಕ ಕುಬಳೆಯಲ್ಲಿ ಬಸ್ಸು ನಿಲ್ಲುತ್ತಿದ್ದಂತೆ ವಿಷಯ ತಿಳಿದ ಸಾರ್ವಜನಿಕರು ಈ ಯುವಕನಿಗೆ ನಾಲ್ಕೇಟು ಬಿಗಿದಿದ್ದಾರೆ. ಬಳಿಕ ಕುಂಬಳೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ನಡೆಸಿ ಬಾಯಿ ಬಿಡಿಸಿದಾಗ ಆತನು ಪಶ್ಚಿಮ ಬಂಗಾಳದ ನಸೀಬುಲ್ ಎಂದು ತಿಳಿದುಬಂದಿದೆ, ಯುವತಿಯ ಜೊತೆ ಇರುವ ಬಯಕೆಯಿಂದ ತಾನು ಈ ಕೃತ್ಯ ಎಸಗಿರುವುದಾಗಿ ನಸೀಬುಲ್ ಹೇಳಿದ್ದಾನೆ.
ಹೊಡೆದ ಬಳಿಕ ಯುವಕನನ್ನು ಸಾರ್ವಜನಿಕರು ಕುಂಬಳೆ ಪೋಲೀಸರಿಗೆ ಅವರು ಬಂಧಿಸಿ ಮುಂದಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.