Saturday, January 18, 2025
Homeಸುದ್ದಿ25 ವರ್ಷದ ಮಹಿಳಾ ಪೈಲಟ್ ಸೃಷ್ಟಿ ಆತ್ಮಹತ್ಯೆ - ಮಾಂಸಾಹಾರ ಸೇವಿಸಿದ್ದಕ್ಕಾಗಿ ಅವಮಾನಿಸಿದ ಪ್ರಿಯಕರನ ಕೃತ್ಯದಿಂದ...

25 ವರ್ಷದ ಮಹಿಳಾ ಪೈಲಟ್ ಸೃಷ್ಟಿ ಆತ್ಮಹತ್ಯೆ – ಮಾಂಸಾಹಾರ ಸೇವಿಸಿದ್ದಕ್ಕಾಗಿ ಅವಮಾನಿಸಿದ ಪ್ರಿಯಕರನ ಕೃತ್ಯದಿಂದ ನೊಂದು ಆತ್ಮಹತ್ಯೆ ಎಂದು ಆರೋಪಿಸಿದ ಕುಟುಂಬ

25 ವರ್ಷದ ಏರ್ ಇಂಡಿಯಾ ಪೈಲಟ್ ಸೋಮವಾರ ಬೆಳಗ್ಗೆ ಮುಂಬೈನ ಅಂಧೇರಿಯಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆಗಾಗಿ ದೆಹಲಿಯಲ್ಲಿ ಬಂಧನಕ್ಕೊಳಗಾದ ಆಕೆಯ 27 ವರ್ಷದ ಗೆಳೆಯ, ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಕ್ಕಾಗಿ ಆಕೆಯನ್ನು ಅವಮಾನಿಸಿದ್ದಾನೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ.

ಪೊಲೀಸರ ಪ್ರಕಾರ, ಸೃಷ್ಟಿ ತುಲಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಸೇರಿದವಳು ಮತ್ತು ಆದಿತ್ಯನಿಂದ ನಿಂದನೆಗೆ ಒಳಗಾಗಿದ್ದಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೋರಾಡುತ್ತಿದ್ದಳು.

ಗುರುಗ್ರಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ಆದಿತ್ಯ ಅವಳನ್ನು ಇತರರ ಮುಂದೆ ಅವಮಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಆದಿತ್ಯ ಆಕೆಯನ್ನು ಅರ್ಧ ದಾರಿಯಲ್ಲಿ ಬಿಟ್ಟು ಮನೆಗೆ ತೆರಳಿದ್ದಾನೆ.

ಸೃಷ್ಟಿ ಭಾನುವಾರ ಸಂಜೆ ಕೆಲಸ ಮುಗಿಸಿ ವಾಪಸ್ ಬಂದಾಗ ಮನೆಯಲ್ಲಿದ್ದ ಆದಿತ್ಯ ಎಂಬಾತನ ಜತೆ ಜಗಳವಾಡಿದ್ದಾಳೆ. ಬಳಿಕ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆದಿತ್ಯ ದೆಹಲಿಗೆ ತೆರಳಿದ್ದಾರೆ

ಸೃಷ್ಟಿ ನಂತರ ಅವನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು, ಕೂಡಲೇ ಆದಿತ್ಯ ಆಕೆಯ ಮನೆಗೆ ಮರಳಿದ. ಆದರೆ, ಆಕೆಯ ಮನೆ ತಲುಪಿದಾಗ ಬಾಗಿಲು ಹಾಕಿರುವುದು ಕಂಡು ಕೂಗಿದರೂ ಆಕೆ ಪ್ರತಿಕ್ರಿಯಿಸಲಿಲ್ಲ.

ಆದಿತ್ಯ ಕೀ ಮೇಕರ್ ಸಹಾಯದಿಂದ ಬೀಗ ಒಡೆದು ನೋಡಿದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು.

ಆಕೆಯ ಕುಟುಂಬ ಸದಸ್ಯರು ಆದಿತ್ಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತ ಅವಳನ್ನು ನಿಂದಿಸುತ್ತಿದ್ದ ಎಂದು ಆರೋಪಿಸಿದ್ದಾರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

ಸೃಷ್ಟಿಯ ಬ್ಯಾಂಕ್ ಖಾತೆಯಿಂದ ಆದಿತ್ಯಗೆ ಕಳೆದ ತಿಂಗಳು 65 ಸಾವಿರ ರೂಪಾಯಿ ವ್ಯವಹಾರ ನಡೆದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸೃಷ್ಟಿಯು ಕತ್ತು ಹಿಸುಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಪೈಲಟ್ ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ

ಆದಿತ್ಯನೊಡನೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ಹೇಳಿದಾಗ ಆದಿತ್ಯ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಸೃಷ್ಟಿಯ ಚಿಕ್ಕಪ್ಪ ವಿವೇಕ್ ಪ್ರಶ್ನಿಸಿದ್ದಾರೆ.

ಆದಿತ್ಯ ಅಪರಾಧ ನಡೆದ ಸ್ಥಳವನ್ನು ವಿರೂಪಗೊಳಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಮನೆ ಯಥಾಸ್ಥಿತಿಯಲ್ಲಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಆದಿತ್ಯನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments