Saturday, January 18, 2025
Homeಸುದ್ದಿಪ್ರೀತಿಗೆ ಮತ್ತೊಂದು ಬಲಿ - ತನ್ನ ಪ್ರಿಯತಮೆಗೆ ಚೂರಿಯಿಂದ ಇರಿದ ಪ್ರಿಯಕರ

ಪ್ರೀತಿಗೆ ಮತ್ತೊಂದು ಬಲಿ – ತನ್ನ ಪ್ರಿಯತಮೆಗೆ ಚೂರಿಯಿಂದ ಇರಿದ ಪ್ರಿಯಕರ

ಹದಿಹರೆಯದವರ ಕುರುಡು ಪ್ರೀತಿಗೆ ಮತ್ತೊಂದು ಬಲಿಯಾಗಿದೆ. ಯುವಕನೊಬ್ಬ ತಾನು ಪ್ರಿತಿಸುವ ಹುಡುಗಿಯನ್ನೇ ಕೊಂದಿದ್ದಾನೆ. ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.

ಹುಡುಗಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆಕೆಯ ಪ್ರಿಯಕರನೇ ತನ್ನ ಗೆಳತಿಯನ್ನು ಈ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ದಿನೇದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಚಾಕು ಇರಿದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಇಂದಿರಾ ನಗರದ ಅಪಾರ್ಟ್‍ಮೆಂಟಿನಲ್ಲಿ ನಡೆದಿದೆ.

ಅಸ್ಸಾಂ ಮೂಲದ ಮಾಯಾ ಗೊಗಾಯ್ ಎಂದು ಕೊಲೆಯಾದ ಯುವತಿಯನ್ನು ಗುರುತಿಸಲಾಗಿದೆ. ಈ ಯುವತಿಯು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಳು.

ಕೊಲೆಗೆ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

ಕೊಲೆ ನಡೆದ ಜಾಗಕ್ಕೆ ಇಂದಿರಾ ನಗರದ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments