ತಾನು ಹೆತ್ತ ಇಬ್ಬರು ಮಕ್ಕಳನ್ನು ತಾಯಿ ಕೊಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ತನ್ನ ಮಕ್ಕಳನ್ನ ಕೊಂದ ನಂತರ ತಾನೂ ಕೊರಳನ್ನು ಸೀಳಿ ಆತ್ಮಹತ್ಯೆಗೆ ಆ ಮಹಿಳೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನ್ನ ಮಕ್ಕಳಾದ ಸುಭಂ (7), ಸಿಯಾ (3) ರನ್ನು ಮೊದಲು ಮಹಿಳೆ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದಳು. ನಂತರ ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾಳೆ.
“ಮಕ್ಕಳ ಅಮ್ಮನೇ ಕೊಲೆ ಮಾಡಿರುವ ಸಂಶಯ ಇದೆ. ಆ ದಿಸೆಯಲ್ಲಿ ತನಿಖೆಯನ್ನ ಮಾಡುತ್ತೇವೆ. ಮಕ್ಕಳ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನಮ್ಮಿಬ್ಬರ ಅಂದರೆ ಗಂಡ ಹೆಂಡತಿ ನಡುವೆ ಜಗಳ ಆಗುತ್ತಿದೆ. ಅದಕ್ಕಾಗಿ ಗಂಡ ಕೊಲೆ ಮಾಡಿದ್ದಾನೆ ಎಂದು ಹೆಂಡತಿ ಹೇಳುತ್ತಿದ್ದಾಳೆ” ಎಂದು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಹೇಳಿದ್ದಾರೆ.