ಕಾರ್ಕಳ: ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷದಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರೂ ಆದ ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ “ಸಾವಿರದ ನೆನಪು” ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ವಿದ್ವಾಂಸ ರಾಘವ ನಂಬಿಯಾರ್ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಕೆ.ಗುಣಪಾಲ ಕಡಂಬ, ಇರ್ವತ್ತೂರು ಉದಯ ಕುಮಾರ್ ಜೈನ್, ಹಾಗೂ ಮದ್ರಬೆಟ್ಟು ವಸಂತ ಅಧಿಕಾರಿ, ಜಗದೀಶ ಅಧಿಕಾರಿ, ಶ್ರೀಮತಿ ವಿಜಯ ಶ್ರೀಧರ ಪಾಂಡಿ, ಪುತ್ರಿ ಶ್ರೀಮತಿ ಶ್ರೀಶಾ, ಪುತ್ರ ಶ್ರೀಕಾಂತ್ ಕುಮಾರ್ ಉಪಸ್ಥಿತರಿದ್ದರು.
ಅಧ್ಯಾಪಕ, ವಾಗ್ಮಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು ಮೂಡಬಿದಿರೆಯ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ವಂದಿಸಿದರು.
ನಂತರ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಬೀಷ್ಮ ವಿಜಯ ತಾಳಮದ್ದಳೆ ಜರಗಿತು.
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
- ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ಪ್ರದಾನ – ಭೀಷ್ಮ ವಿಜಯ ತಾಳಮದ್ದಳೆ