ಯಕ್ಷಗಾನ ಕಲಾರಂಗ ಸಂಸ್ಥೆಯ ಆಜೀವ ಸದಸ್ಯರಾದ ಎನ್. ಸೀತಾರಾಮ ಶೆಟ್ಟಿ (70) ಇವರು ಅಲ್ಪಕಾಲದ ಅಸೌಖ್ಯದಿಂದ 17-11-2024ರಂದು ದೈವಾಧೀನರಾದರು.
ಬಿಲ್ಲಾಡಿಯ ಯಕ್ಷಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಸಂಸ್ಥಾಪಕರಾದ ಇವರು ಯಕ್ಷಗಾನದ ಬಗ್ಗೆ ಅತೀವ ಒಲವುಳ್ಳವರಾಗಿದ್ದರು.
ಯಕ್ಷಗಾನ ಕಲಾರಂಗದ ಬಗ್ಗೆ ವಿಶೇಷೆ ಗೌರವಾದರಗಳನ್ನು ಹೊಂದಿದವರಾಗಿದ್ದ ಇವರು ವಿದ್ಯಾಪೋಷಕ್‌ಗೆ ನಿರಂತರವಾಗಿ ದೊಡ್ಡ ಮೊತ್ತದ ದೇಣಿಗೆ ನೀಡುತ್ತಾ ಬಂದಿದ್ದರು.
ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭಕ್ಕೂ ಇವರ ಕೊಡುಗೆ ದೊಡ್ಡದು. ಯಕ್ಷಗಾನವನ್ನು ಪ್ರೀತಿಸುವ ಇವರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಸಂಖ್ಯೆಯ ಬಂಧುಬಾಂಧವರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.