ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಅವರ ಬ್ಯಾಗ್ ಅನ್ನು ಪರಿಶೀಲಿಸಿದೆ. ಅಮರಾವತಿಯಲ್ಲಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬ್ಯಾಗ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ಶನಿವಾರ ಪರಿಶೀಲಿಸಿದರು. ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಗದ್ದಲದ ನಡುವೆ ಈ ಘಟನೆ ಸಂಭವಿಸಿದೆ,
ಈ ತಂಡ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ನಲ್ಲಿ ಹತ್ತಿ ಶೋಧ ಕಾರ್ಯ ನಡೆಸಿತು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರತಿಪಕ್ಷ ನಾಯಕರ ಬ್ಯಾಗ್ ತಪಾಸಣೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯ ನಡುವೆಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬ್ಯಾಗ್ ತಪಾಸಣೆ ನಡೆಸಲಾಯಿತು.
ವಿಡಿಯೋದಲ್ಲಿ ಅಧಿಕಾರಿಗಳು ರಾಹುಲ್ ಅವರ ಬ್ಯಾಗ್ ಅನ್ನು ಪರಿಶೀಲಿಸುತ್ತಿದ್ದಾರೆ. ತಪಾಸಣೆ ನಡೆಯುತ್ತಿರುವಾಗಲೇ ರಾಹುಲ್ ದೂರ ಹೋಗುತ್ತಿರುವುದು ಕಂಡು ಬರುತ್ತಿದೆ. ಕಾಂಗ್ರೆಸ್ ಮುಖಂಡರು ನೋಡ ನೋಡುತ್ತಲೇ ಈ ಕ್ರಮ ಕೈಗೊಳ್ಳಲಾಗಿದೆ.
ಇದಕ್ಕೂ ಮುನ್ನ ಶಿವಸೇನೆಯ ಉದ್ಧವ್ ಠಾಕ್ರೆ ಬಣ ವಿರೋಧ ಪಕ್ಷದ ನಾಯಕರ ಬ್ಯಾಗ್ ತಪಾಸಣೆಯ ವಿರುದ್ಧ ಹರಿಹಾಯ್ದಿತ್ತು. ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ಬ್ಯಾಗ್‌ಗಳನ್ನು ಅಂತಹ ರೀತಿಯಲ್ಲಿ ಪರಿಶೀಲಿಸಲು ಸಿದ್ಧವಾಗಿದೆಯೇ ಎಂದು ಉದ್ಧವ್ ಕೇಳಿದ್ದರು. ರಾಹುಲ್ ಹೆಲಿಕಾಪ್ಟರ್‌ಗೆ ಜಾರ್ಖಂಡ್‌ನಲ್ಲಿ ಟೇಕಾಫ್ ಮಾಡಲು ಅನುಮತಿ ನಿರಾಕರಿಸಲಾದ ನಡುವೆಯೇ ಈ ಘಟನೆ ನಡೆದಿದೆ.
ತಪಾಸಣೆಯ ವೀಡಿಯೊದಲ್ಲಿ ಅಧಿಕಾರಿಗಳ ಗುಂಪು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಅನ್ನು ಮೈದಾನದಲ್ಲಿ ಹುಡುಕುತ್ತಿರುವುದನ್ನು ತೋರಿಸುತ್ತದೆ, ಕಾಂಗ್ರೆಸ್ ನಾಯಕ ಹತ್ತಿರ ನಿಂತಿದ್ದಾರೆ. ಬ್ಯಾಗ್ ಪರಿಶೀಲನೆ ಮುಂದುವರಿದಂತೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗಾಂಧಿ ಅವರು ಹೊರನಡೆದರು ಮತ್ತು ಪಕ್ಷದ ನಾಯಕರೊಂದಿಗೆ ತೊಡಗಿಸಿಕೊಂಡಿರುವುದು ಕಂಡುಬಂದಿತು.