Saturday, January 18, 2025
Homeಸುದ್ದಿಯಕ್ಷಸಿಂಚನ - ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನ

ಯಕ್ಷಸಿಂಚನ – ಪ್ರಶಸ್ತಿ ಪ್ರದಾನ, ಯಕ್ಷಗಾನ ಪ್ರದರ್ಶನ

ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇಯಾದ ಸಾಧನೆಯನ್ನು ಮಾಡಿರುವ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರು 15ನೇ ವರುಷದ ವಾರ್ಷಿಕೋತ್ಸವನ್ನು ಅಂಗವಾಗಿ ದಿನಾಂಕ 17ನೇ ನವೆಂಬರ್ 2024 ನೇ ಭಾನುವಾರ ಪೌರಾಣಿಕ ಯಕ್ಷೋತ್ಸವನ್ನು ಆಯೋಜಿಸಿದ್ದಾರೆ.  

ಮಧ್ಯಾಹ್ನ 3 ರಿಂದ  ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಯಕ್ಷಕಲಾ ಅಕಾಡೆಮಿ ಬೆಂಗಳೂರು ಇದರ ಬಾಲ ಕಲಾವಿದರುಗಳು ಹಟ್ಟಿಯಂಗಡಿ ರಾಮಭಟ್ಟ ರಚಿತ ಸುಭದ್ರಾ ಕಲ್ಯಾಣ ಪ್ರಸಂಗದ ಪ್ರದರ್ಶನಗೈಯುಲಿದ್ದಾರೆ.

ನಂತರ ಸಂಜೆ 5 ರಿಂದ ಯಕ್ಷಸಿಂಚನ ತಂಡದ ಕಲಾವಿದರುಗಳು  ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಚಿತ ಮಾನಿಷಾದ ಪ್ರಸಂಗವನ್ನು ಪ್ರದರ್ಶನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗುರುಗಳು ಹಾಗೂ ಭಾಗವತರಾದ ಶ್ರೀ ಉಮೇಶ್ ಭಟ್ ಬಾಡ ಅವರ ನಾಲ್ಕು ದಶಕಗಳ ಯಕ್ಷಗಾನ ಕೈಂಕರ್ಯಕ್ಕಾಗಿ ಅವರಿಗೆ 2024ನೇ ಸಾಲಿನ ಸಾರ್ಥಕ ಸಾಧಕ ಗೌರವ ಪ್ರಶಸ್ತಿ ಪ್ರದಾನವಾಗಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಮೋಹನ್ ಹೆಗಡೆ, ಖ್ಯಾತ ಅರ್ಥಧಾರಿಗಳು ಹಾಗೂ ವೀರಕಪುತ್ರ ಶ್ರೀನಿವಾಸ, ಖ್ಯಾತ ಪ್ರಕಾಶಕರು ಆಗಮಿಸುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರವೀಂದ್ರ ಭಟ್ ಐನಕೈ, ಸಂಪಾದಕರು, ಪ್ರಜಾವಾಣಿ ಕನ್ನಡ ದಿನಪತ್ರಿಕೆ ಇವರು ವಹಿಸಿಕೊಳ್ಳಲಿದ್ದಾರೆ.

ಈ  ಕಾರ್ಯಕ್ರಮವು ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು ಇಲ್ಲಿ ಸಂಪನ್ನವಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಶ್ರೀ ಎ.ಪಿ. ಪಾಠಕ್, ಶ್ರೀ ಕೃಷ್ಣಮೂರ್ತಿ ತುಂಗ, ಕುಮಾರಿ ಚಿತ್ಕಲಾ ತುಂಗ, ಶ್ರೀ ಪನ್ನಗ ಮಯ್ಯ, ಕುಮಾರ ರಜತ್, ಕುಮಾರಿ ಪ್ರಣವಿ, ಕುಮಾರಿ ಪಂಚಮಿ, ಕುಮಾರ ಸ್ಕಂದ, ಕುಮಾರಿ ಪ್ರಣತಿ, ಕುಮಾರ ಸುಜನ್, ಕುಮಾರಿ ವಿದುಲ,

ಕುಮಾರ ಅಕ್ಷಜ್ಞ, ಕುಮಾರಿ ಭಾರ್ಗವಿ, ಕುಮಾರ ಅಶ್ವಿನ್, ಶ್ರೀ ರವಿ ಮಡೋಡಿ, ಶ್ರೀ ಶಶಿರಾಜ ಸೋಮಯಾಜಿ, ಶ್ರೀ ಮನೋಜ್ ಭಟ್,  ಶ್ರೀ ಗುರುರಾಜ್ ಭಟ್, ಶ್ರೀ ಅಭಿನವ ತುಂಗ, ಶ್ರೀ ಆದಿತ್ಯ ಉಡುಪ, ಶ್ರೀ ಕೃಷ್ಣ ಶಾಸ್ತ್ರಿ, ಶ್ರೀ ಆದಿತ್ಯ ಹೊಳ್ಳ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ರಸಂಗಗಳನ್ನು ಕೃಷ್ಣಮೂರ್ತಿ ತುಂಗ ಅವರು ನಿರ್ದೇಶನ ಮಾಡಿರುತ್ತಾರೆ

ಸಂಪರ್ಕ: ರವಿ ಮಡೋಡಿ-9986384205, ಶಶಿರಾಜ ಸೋಮಯಾಜಿ- 9986363495

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments