ಉಡುಪಿ : ಯಕ್ಷಗಾನ ಕಲಾರಂಗದ 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 17, ಭಾನುವಾರ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ರಿಸರ್ಚ್ ಸೆಂಟರ್‌ನಲ್ಲಿ ಅಪರಾಹ್ನ 3.00 ಗಂಟೆಗೆ ಜರಗಲಿದೆ.
ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿರುವರು. ಆರ್.ಎಲ್ ಭಟ್ – ವಾರಿಜಾಕ್ಷಿ ಆರ್. ಭಟ್ ಗೌರವಾರ್ಥ ವ್ಯವಸ್ಥೆಗೊಳಿಸಿದ ಪ್ರಸಾಧನ ಕೊಠಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಿ.ಸಿ ಟಿ.ವಿಯನ್ನು ಉದ್ಘಾಟಿಸಲಾಗುವುದು. ಉಡುಪಿ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಯಕ್ಷ ವಿದ್ಯಾಪೋಷಕ್‌ನ 75 ವಿದ್ಯಾರ್ಥಿಗಳಿಗೆ 6,42,000/- ಸಹಾಯಧನವನ್ನು ವಿತರಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಬೆಂಗಳೂರು ಟೆಕ್ಸೆಲ್ ಪ್ರೈ ಲಿ., ಆಡಳಿತ ನಿರ್ದೇಶಕರಾದ ಶ್ರೀ ಹರೀಶ್ ರಾಯಸ್, ಬೆಂಗಳೂರಿನ ಉದ್ಯಮಿ ಶ್ರೀ ಕೆ. ಸದಾಶಿವ ಭಟ್, ಪೆನ್‌ಟಾಯರ್ ಯುಎಸ್‌ಎಯ ಜನರಲ್ ಮೆನೇಜರ್ ಶ್ರೀ ಹರಿಪ್ರಸಾದ್ ಭಟ್, ಬಿಎಸ್‌ಎನ್‌ಎಲ್‌ನ ನಿವೃತ್ತ ಜನರಲ್ ಮೆನೇಜರ್ ಮಟಪಾಡಿಯ ಶ್ರೀ ಎಂ.ಸಿ. ಕಲ್ಕೂರ, ಮಂಗಳೂರಿನ ನಮ್ಮ ಕುಡ್ಲದ ಆಡಳಿತ ನಿರ್ದೇಶಕರಾದ ಶ್ರೀ ಲೀಲಾಕ್ಷಿ ಬಿ. ಕರ್ಕೇರ, ತೆಕ್ಕಟ್ಟೆ ಯಶಸ್ವಿ ಕಲಾವೃಂದ ಅಧ್ಯಕ್ಷರಾದ ಶ್ರೀ ಸೀತಾರಾಮ ಶೆಟ್ಟಿಯವರು ಪಾಲುಗೊಳ್ಳಲಿರುವರು.
23 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 20,000 ನಗದು ಪುರಸ್ಕಾರದ ಪ್ರಶಸ್ತಿ, ರೂ. 1,00,000/- ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಕೊಮೆ, ತೆಕ್ಕಟ್ಟೆಯ ಯಶಸ್ವಿ ಕಲಾವೃಂದ (ರಿ.) ಸಂಸ್ಥೆಗೆ ಹಾಗೂ ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೆ. ಗಣೇಶ್ ರಾವ್ ಇವರಿಗೆ ಪ್ರದಾನ ಮಾಡಲಾಗುವುದು.
ಈ ಸಂದರ್ಭದಲ್ಲಿ ವಾಸುದೇವ ಸಾಮಗರ 30 ಪ್ರಸಂಗಗಳ ‘ಯಕ್ಷ ರಸಾಯನ’ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಹಾಗೂ ಇತ್ತೀಚೆಗೆ ನಿಧನ ಹೊಂದಿದ ಮೂರು ಮಂದಿ ಕಲಾವಿದರ ಕುಟುಂಬಿಕರಿಗೆ ಸಾಂತ್ವನ ನಿಧಿಯನ್ನು ನೀಡಲಾಗುವುದು.
ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1.45 ರಿಂದ ನವರಸಾಯನ : ಯಕ್ಷಗಾಯನ ಪ್ರಸ್ತುತಿಗೊಳ್ಳಲಿದೆ. ಸಮಾರಂಭದ ಬಳಿಕ ಸಂಜೆ 5.00 ರಿಂದ ಬಡಗುತಿಟ್ಟಿನ ಕಲಾವಿದರಿಂದ ಯಕ್ಷಗಾನ ಬಭ್ರುವಾಹನ ಕಾಳಗ ಪ್ರಸ್ತುತಗೊಳ್ಳಲಿದೆ ಎಂಬುದಾಗಿ ಇಂದು (14.11.2024) ಜರಗಿದ ಪ್ರೆಸ್‌ಕ್ಲಬ್ ಮೀಟಿಂಗ್‌ನಲ್ಲಿ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಕೆ. ಸದಾಶಿವ ಭಟ್ ಹಾಗೂ ಸದಸ್ಯರಾದ ಭುವನಪ್ರಸಾದ್ ಹೆಗ್ಡೆ, ನಿರಂಜನ ಭಟ್ ಉಪಸ್ಥಿತರಿದ್ದರು.
ವಿವಿಧ ಯಕ್ಷಗಾನ ಕಲಾರಂಗ ಪ್ರಶಸ್ತಿ 2024
ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ : ಯಶಸ್ವಿ ಕಲಾವೃಂದ (ರಿ.), ತೆಕ್ಕಟ್ಟೆ, ಕುಂದಾಪುರ
- ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಎಚ್. ನಾರಾಯಣ ಶೆಟ್ಟಿ, ಉಡುಪಿ ಜಿಲ್ಲೆ
- ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ದೇವದಾಸ್ ರಾವ್, ಕೂಡ್ಲಿ, ಉಡುಪಿ ಜಿಲ್ಲೆ
- ನಿಟ್ಟೂರು ಸುಂದರ ಶೆಟ್ಟಿ–ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸುರೇಶ್ ಕುಪ್ಪೆಪದವು, ದ.ಕ ಜಿಲ್ಲೆ
- ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಪುರಂದರ ಹೆಗಡೆ, ನಾಗರಕೊಡಿಗೆ, ಶಿವಮೊಗ್ಗ ಜಿಲ್ಲೆ
- ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಗುಂಡಿಬೈಲು ನಾರಾಯಣ ಭಟ್, ಉ.ಕ ಜಿಲ್ಲೆ
- ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಅಶೋಕ ಶೆಟ್ಟಿ, ಸರಪಾಡಿ , ದ.ಕ ಜಿಲ್ಲೆ
- ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ಕಿಗ್ಗ ಹಿರಿಯಣ್ಣ ಆಚಾರ್, ಚಿಕ್ಕಮಗಳೂರು ಜಿಲ್ಲೆ
- ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ : ಥಂಡಿಮನೆ ಶ್ರೀಪಾದ್ ಭಟ್, ಉ.ಕ ಜಿಲ್ಲೆ
- ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ : ಹೆರಿಯ ನಾಯ್ಕ, ಮೊಗೆಬೆಟ್ಟು, ಉಡುಪಿ ಜಿಲ್ಲೆ
- ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಕೆ. ಬಾಬು ಗೌಡ, ತೋಡಿಕಾನ, ದ.ಕ ಜಿಲ್ಲೆ
- ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ : ಹಾಲಾಡಿ ಕೃಷ್ಣ ಮರಕಾಲ, ಉಡುಪಿ ಜಿಲ್ಲೆ
- ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಪೂಜಾರಿ ಚಕ್ರಮೈದಾನ , ಉಡುಪಿ ಜಿಲ್ಲೆ
- ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ಹಾವಂಜೆ ಮಂಜುನಾಥ ರಾವ್, ಉಡುಪಿ ಜಿಲ್ಲೆ
- ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಹೆರಂಜಾಲು ಗೋಪಾಲ ಗಾಣಿಗ, ಉಡುಪಿ ಜಿಲ್ಲೆ
- ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ : ರಾಧಾಕೃಷ್ಣ ನಾಯಕ್, ಚೇರ್ಕಾಡಿ, ಉಡುಪಿ ಜಿಲ್ಲೆ
- ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ : ಶೇಣಿ ಸುಬ್ರಹ್ಮಣ್ಯ ಭಟ್, ಕಾಸರಗೋಡು ಜಿಲ್ಲೆ
- ಕಡಂದೇಲು ಪುರುಷೋತ್ತಮ ಭಟ್ ಸ್ಮರಣಾರ್ಥ ಪ್ರಶಸ್ತಿ : ಸರಪಾಡಿ ಶಂಕರ ನಾರಾಯಣ ಕಾರಂತ, ದ.ಕ ಜಿಲ್ಲೆ
- ಕಡತೋಕ ಕೃಷ್ಣ ಭಾಗವತ ಸ್ಮರಣಾರ್ಥ ಪ್ರಶಸ್ತಿ : ವೆಂಕಟ ರಾವ್ ಹೊಡಬಟ್ಟೆ, ಸಾಗರ, ಶಿವಮೊಗ್ಗ ಜಿಲ್ಲೆ
- ಬಿ. ಪಿ. ಕರ್ಕೇರಾ ಸ್ಮರಣಾರ್ಥ ಪ್ರಶಸ್ತಿ : ರಮಾನಂದ ರಾವ್, ಕಟೀಲು, ದ.ಕ ಜಿಲ್ಲೆ
- ಕೆ. ಮನೋಹರ ಸ್ಮರಣಾರ್ಥ ಪ್ರಶಸ್ತಿ : ನರಸಿಂಹ ಮಡಿವಾಳ, ಹೆಗ್ಗುಂಜೆ, ಉಡುಪಿ ಜಿಲ್ಲೆ
- ಆರ್. ಕೆ. ರಮೇಶ ರಾವ್ ಸ್ಮರಣಾರ್ಥ : ಎಲ್ಲೂರು ಕೆ. ಶ್ರೀನಿವಾಸ ಉಪಾಧ್ಯಾಯ, ಉಡುಪಿ ಜಿಲ್ಲೆ
- ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ : ಅಂಬಾಪ್ರಸಾದ ಪಾತಾಳ, ದ.ಕ ಜಿಲ್ಲೆ
- ಶ್ರೀಮತಿ ಪ್ರಭಾವತಿ ವಿ. ಶೆಣೈ – ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಗಜಾನನ ಸತ್ಯನಾರಾಣ ಭಂಡಾರಿ, ಉ.ಕ ಜಿಲ್ಲೆ
ಯಕ್ಷಚೇತನ ಪ್ರಶಸ್ತಿ : ಕೆ. ಗಣೇಶ್ ರಾವ್
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions